ದಾವಣಗೆರೆ: ತಾಲೂಕಿನ ನಲ್ಲೂರು ಗ್ರಾಮದಲ್ಲಿ ಇದೇ 21 ರಿಂದ 25 ರವರೆಗೆ ಬೆಳ್ಳಿ ಹಬ್ಬ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಜಾಗೃತಿ ಸಮಿತಿ ಗೌರವಾಧ್ಯಕ್ಷ ರುದ್ರೇಶಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಣ್ಣೆನಗರಿಯಲ್ಲಿ ಬೆಳ್ಳಿಹಬ್ಬ.. ರಕ್ತದಾನ ಶಿಬಿರ, ಸೂಳೆಕೆರೆ ಅಭಿವೃದ್ಧಿಗೆ ಜಾಥಾ.. - ದಾವಣಗೆರೆಯಲ್ಲಿ ಕನ್ನಡ ಜಾಗೃತಿ ಸಮಿತಿ ಸುದ್ದಿಗೋಷ್ಟಿ
ದಾವಣಗೆರೆ ಜಿಲ್ಲೆಯ ನಲ್ಲೂರು ಗ್ರಾಮದಲ್ಲಿ ಇದೇ 21 ರಿಂದ 25 ರವರೆಗೆ ಬೆಳ್ಳಿ ಹಬ್ಬ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕಳೆದ 25 ವರ್ಷಗಳಿಂದ ಕನ್ನಡ ಜಾಗೃತಿ ಸಮಿತಿ ಹಲವು ಸಾಮಾಜಿಕ ಕೆಲಸ ನಿರ್ವಹಿಸುತ್ತಾ ಬಂದಿದ್ದು, ಈ ಹಿನ್ನೆಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಲ್ಲೂರು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 25ರ ಬೆಳಗ್ಗೆ 8.30ರಿಂದ ಕಾರ್ಯಕ್ರಮ ಶುರುವಾಗಲಿದೆ. ರಕ್ತದಾನ ಶಿಬಿರ, ಲಸಿಕೆ ಕಾರ್ಯಕ್ರಮಗಳು, ಸೂಳೆಕೆರೆ ಅಭಿವೃದ್ಧಿಗೆ ಜಾಥಾ, ಶಿಕ್ಷಣ, ಕಲೆ ಸಾಹಿತ್ಯ, ವೈದ್ಯಕೀಯ, ಸಮಾಜಸೇವೆ, ಕನ್ನಡಪರ ಹೋರಾಟ, ಗಣ್ಯರಿಗೆ ಗೌರವ ಹೀಗೆ ಹತ್ತಾರು ಸಮಾಜ ಸೇವೆ ನಡೆಸುತ್ತಾ ಬಂದಿದೆ.
ನಾಡದೇವಿ ಭುವನೇಶ್ವರಿ ಮೆರವಣಿಗೆ ಮಾಡಿ ನಂತರ ಸಭಾ ಕಾರ್ಯಕ್ರಮವನ್ನು ಅಡಿಕೆ ವರ್ತಕ ಅಹ್ಮದ್ ಜಾನ್ ಉದ್ಘಾಟಿಸಲಿದ್ದಾರೆ. ಮೂಢನಂಬಿಕೆ ವಿರುದ್ಧ ಜಾಗೃತಿ ಪವಾಡಗಳ ಅನಾವರಣ ಕಾರ್ಯಕ್ರಮವನ್ನು ಹುಳಿಕಲ್ ನಟರಾಜ್ ನಡೆಸಲಿದ್ದಾರೆ. ಕಾಡೇ ಗೂಡೇ ಪರಿಸರ ಜಾಗೃತಿ ಕಿರುದೃಶ್ಯ ರೂಪಕ ಪ್ರದರ್ಶನ ನಡೆಯಲಿದೆ ಎಂದು ರುದ್ರೇಶಗೌಡ ತಿಳಿಸಿದರು.