ಕರ್ನಾಟಕ

karnataka

ETV Bharat / state

Bear love story: ಭೀಮ ಲವ್ಸ್‌ ಪಾರ್ವತಿ; ಇದು ದಾವಣಗೆರೆ ಇಂದಿರಾಪ್ರಿಯದರ್ಶಿನಿ ಕಿರು ಮೃಗಾಲಯದ ಒಂಟಿ ಕರಡಿಯ ಪ್ರೇಮ ಕಹಾನಿ!

ಆನಗೋಡಿನ ಇಂದಿರಾಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕರಡಿಗಳ ವಿವಾಹಕ್ಕೆ ವೇದಿಕೆ ಸಿದ್ದವಾಗಿದೆ.

ಕರಡಿ ಲವ್ ಸ್ಟೋರಿ
ಕರಡಿ ಲವ್ ಸ್ಟೋರಿ

By

Published : Jun 8, 2023, 6:47 PM IST

ದಾವಣಗೆರೆ :ನಾವು ಹಲವು ಪ್ರೇಮ ಕಥೆಗಳನ್ನು ಕೇಳಿರುತ್ತೇವೆ, ಕೆಲವೊಂದನ್ನು ಕಣ್ಣಾರೆ ನೋಡಿರುತ್ತೇವೆ. ಹಾಗೆಯೇ ಲವ್ ಬ್ರೇಕ್ ಅಪ್, ಒನ್ ಸೈಡ್ ಲವ್, ಟೂ ಸೈಡ್ ಸ್ಟೋರಿಗಳೆಲ್ಲ ಸಾಮಾನ್ಯ. ಆದರೆ ಪ್ರಾಣಿಗಳ ಪ್ರೇಮ ಕಹಾನಿ ಅಂದರೆ ಸ್ವಲ್ಪ ಕುತೂಹಲ ಉಂಟಾಗುತ್ತದೆ. ಹೌದು, ದಾವಣಗೆರೆಯ ಒಂಟಿ ಜಾಂಬವಂತನ ಸ್ಟೋರಿ ನಿಮ್ಮ ಮೊಗದಲ್ಲಿ ನಗು ಮೂಡಿಸಬಹುದು.

ಜಿಲ್ಲೆಯಲ್ಲಿರುವ ಏಕೈಕ ಮೃಗಾಲಯ ಆನಗೋಡಿನ ಇಂದಿರಾಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ವಾಸ್ತವ್ಯ ಹೂಡಿರುವ ಭೀಮ ಎಂಬ ನಾಮಾಂಕಿತ ಗಂಡು ಕರಡಿ ಕಳೆದ ಎರಡು ವರ್ಷಗಳಿಂದ ಏಕಾಂಗಿಯಾಗಿದ್ದ. ಇದೀಗ ಆತನಿಗೆ ಪಾರ್ವತಿ ಎಂಬ ಸಂಗಾತಿ ಸಿಕ್ಕಿದ್ದಾಳೆ‌. ಭೀಮನಿಗೆ ಚಿತ್ರದುರ್ಗ ಮೂಲದ ಪಾರ್ವತಿ ಜೊತೆ ಮದುವೆ ಮಾಡಲು ಮೃಗಾಲಯದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಈ ಹಿಂದೆ ಭೀಮನೊಂದಿಗಿದ್ದ ಲಕ್ಷ್ಮಿ ಎಂಬ ಕರಡಿ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಳು.

ಇದನ್ನೂ ಓದಿ :ಚಾಮರಾಜನಗರ: ಕರಡಿ ದಾಳಿಗೆ ದನಗಾಹಿ ಬಲಿ, ವ್ಯಕ್ತಿ ಶವದ ಜೊತೆಗಿನ ಕರಡಿ ಚಿತ್ರ ಸೆರೆ

ಲಕ್ಷ್ಮಿ ಸಾವನ್ನಪ್ಪಿದ ತರುವಾಯ ಭೀಮ ಏಕಾಂಗಿಯಾಗಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಇಡೀ ಮೃಗಾಲಯದಲ್ಲಿ ಜನರಿಗೆ ಅಚ್ಚುಮೆಚ್ಚಾಗಿದ್ದ ಭೀಮನನ್ನು ನೋಡಲು ಮೃಗಾಲಯಕ್ಕೆ ಆಗಮಿಸುವ ಜನರಿಗೆ ಅಷ್ಟು ಮನರಂಜನೆ ಸಿಗುತ್ತಿರಲಿಲ್ಲ. ಆದರೀಗ ಏಕಾಂಗಿಯಾಗಿದ್ದವನು ಜೋಡಿಯಾಗುವ ಸಂತಸದಿಂದಿದ್ದಾನೆ.

ಚಿತ್ರದುರ್ಗ ತಾಲೂಕಿನ ಫಲವನಹಳ್ಳಿ ಹಾಗು ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ಅರಣ್ಯದ ಕೂಗಳತೆಯಲ್ಲಿ ಪಾರ್ವತಿ ಎಂಬ ಹೆಸರನ್ನಿಟ್ಟಿರುವ ಹೆಣ್ಣು ಕರಡಿ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಅಲ್ಲಿನ ಜನರಿಗೆ ಹೆಣ್ಣು ಕರಡಿಯೂ ಸಾಕಷ್ಟು ಕಾಟ ಕೊಡುತ್ತಿತ್ತಂತೆ. ಅರಣ್ಯ ಇಲಾಖೆಯ ಸಿಬ್ಬಂದಿ ವನ್ಯಜೀವಿ ಪರಿಪಾಲಕ ಅಧಿಕಾರಿಗಳ ಸಹಾಯದಿಂದ ಸೆರೆ ಹಿಡಿದು ಅನಗೋಡಿಗೆ ಕರೆತಂದು ಬಿಟ್ಟಿದ್ದಾರೆ. ಹೀಗಾಗಿ ಭೀಮ ನಾಮಾಂಕಿತ ಗಂಡು ಕರಡಿಗೂ ಮತ್ತು ಪಾರ್ವತಿ ಎಂಬ ಹೆಣ್ಣು ಕರಡಿಗೂ ವಿವಾಹ ಮಾಡಲು ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪಾರ್ವತಿಯನ್ನು ತಂದು ಬಿಡುವ ಸಂದರ್ಭದಲ್ಲಿ ವೈದ್ಯರ ಬಳಿ ಅನುಮತಿ ಕೂಡಾ ಕೋರಲಾಗಿದೆ.

ಜಿಲ್ಲಾ ಅರಣ್ಯಾಧಿಕಾರಿ ಹೇಳಿದ್ದೇನು?:ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅರಣ್ಯಾಧಿಕಾರಿ ಜಗನ್ನಾಥ್, "ಈಗಾಗಲೇ ಆನಗೋಡಿಗೆ ಕರೆತಂದಿರುವ ಪಾರ್ವತಿ ಎಂಬ ಹೆಣ್ಣು ಕರಡಿ ಹಾಗು ಭೀಮ ಎಂಬ ಗಂಡು ಕರಡಿಯನ್ನು ಬೇರೆ ಬೇರೆ ಕೋಣೆಯಲ್ಲಿ ಇರಿಸಲಾಗಿದೆ. ಇನ್ನು ಒಂದು ಕೋಣೆಯಲ್ಲೇ ಬಿಡಲು ಸಿದ್ಧತೆ ನಡೆದಿದೆ. ಇಷ್ಟು ದಿನಗಳ ಕಾಲ ಏಕಾಂಗಿಯಾಗಿದ್ದ ಏಳು ವರ್ಷ ವಯಸ್ಸಿನ ಭೀಮನಿಗೆ ಮೂರು ವರ್ಷದ ಪಾರ್ವತಿ ಎಂಬ ಹೆಣ್ಣು ಕರಡಿ ಸಂಗಾತಿಯಾಗಲಿದ್ದು, ಒಂದೊಂದು ಕರಡಿಯನ್ನು ಪ್ರತ್ಯೇಕ ಕೋಣೆಯಲ್ಲಿ ಬಿಡಲಾಗಿದೆ. ಒಂದೇ ಕೋಣೆಯಲ್ಲಿ ಬಿಡಲು ಮುಹೂರ್ತ ನಿಗದಿ ಮಾಡಬೇಕಾಗಿದೆ" ಎಂದು ಅವರು ಮಾಹಿತಿ ನೀಡಿದರು.‌

ಇದನ್ನೂ ಓದಿ :ತುಮಕೂರು: ಬೋನಿಗೆ ಬಿದ್ದ ಮರಿ ಹುಡುಕಿ ಬಂದ ತಾಯಿ ಕರಡಿಯೂ ಸೆರೆ

ABOUT THE AUTHOR

...view details