ದಾವಣಗೆರೆ :ಕರಡಿಗಳು ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ.
ಕರಡಿಗಳ ದಾಳಿಯಿಂದ ರೈತ ಪ್ರಾಣ ಉಳಿಸಿಕೊಂಡು ಬಂದಿರೋದೇ ಪವಾಡ.. - ರೈಥನ ಮೇಲೆ ಕರಡಿ ದಾಳಿ
ರೈತ ಜಮೀನಿಗೆ ಹೋಗುವಾಗ ಹಿಂಬದಿಯಿಂದ ಬಂದು ಎರಡು ಕರಡಿಗಳು ಆತನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

ಕರಡಿಗಳ ದಾಳಿ
ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ರೈತ..
ದುರುಗಪ್ಪ ಎಂಬುವರು ಕರಡಿಯಿಂದ ದಾಳಿಗೀಡಾದ ರೈತ. ಬೆಳಗ್ಗೆ ತಮ್ಮ ಜಮೀನಿಗೆ ಹೋಗುವಾಗ ಹಿಂಬದಿಯಿಂದ ಬಂದು ಎರಡು ಕರಡಿಗಳು ದಾಳಿ ಮಾಡಿದ್ರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಸತ್ತವನಂತೆ ಮಲಗಿದ್ದರಿಂದ ಮೂಸಿ ನೋಡಿ ಅಲ್ಲಿಂದ ಕರಡಿಗಳು ಕಾಲ್ಕಿತ್ತಿವೆ.
ಗಾಯಗಳಿಂದ ರಕ್ತಸ್ರಾವ ಆಗುತ್ತಿದ್ದರೂ ಗ್ರಾಮಕ್ಕೆ ರೈತ ನಡೆದುಕೊಂಡು ಬಂದಿದ್ದು, ಬಳಿಕ ಗ್ರಾಮಸ್ಥರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಗಾಯಾಳುವನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.