ದಾವಣಗೆರೆ :ರೈತನೊಬ್ಬನ ಮೇಲೆಏಕಾಏಕಿ ಮೂರು ಕರಡಿಗಳು ದಾಳಿ ನಡೆಸಿರೋ ಘಟನೆ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ರೈತನ ಮೇಲೆ ಏಕಾಏಕಿ ಮೂರು ಕರಡಿಗಳ ದಾಳಿ.. ಗಾಯಾಳು ಸ್ಥಿತಿ ಗಂಭೀರ - Davangere News
ತೀವ್ರವಾಗಿ ಗಾಯಗೊಂಡ ರೈತ ರೇವಣ್ಣ ಅವರನ್ನು ಜಗಳೂರಿನ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ..
ಕರಡಿಗಳ ದಾಳಿಗೊಳಗಾದ ರೈತ
ರೇವಣ್ಣ(33) ದಾಳಿಗೊಳಗಾಗಿರುವ ರೈತ. ರೇವಣ್ಣ ತಮ್ಮ ಜಮೀನಿನಲ್ಲಿ ನೀರು ಹಾಯಿಸುವಾಗ ಏಕಾಏಕಿಯಾಗಿ ಮೂರು ಕರಡಿಗಳು ದಾಳಿ ನಡೆಸಿವೆ. ತೀವ್ರವಾಗಿ ಗಾಯಗೊಂಡ ರೈತ ರೇವಣ್ಣ ಅವರನ್ನು ಜಗಳೂರಿನ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ತಹಶೀಲ್ದಾರ್ ನಾಗವೇಣಿ ಭೇಟಿ ನೀಡಿ ಗಾಯಾಳು ರೈತನ ಯೋಗಕ್ಷೇಮ ವಿಚಾರಿಸಿದ್ದಾರೆ. ರೈತನ ಸ್ಥಿತಿ ಗಂಭೀರವಾಗಿದೆ.