ದಾವಣಗೆರೆ: ಹೊಲದಲ್ಲಿ ಎತ್ತು ಮೇಯಿಸುತ್ತಿದ್ದಾಗ ಕರಡಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತ ಮಂಜಪ್ಪ ಭಾನುವಾರ ಬೆಳಗ್ಗೆ ಮೃತ ಪಟ್ಟಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಯಲು ದಿಬ್ಬ ಗ್ರಾಮದಲ್ಲಿ ನವೆಂಬರ್ 3ರಂದು ನಡೆದಿದೆ.
ದಾವಣಗೆರೆ: ಕರಡಿ ದಾಳಿಗೆ ತುತ್ತಾಗಿದ್ದ ವ್ಯಕ್ತಿ ಸಾವು - ದಾವಣಗೆರೆ ಕರಡಿ ಸುದ್ದಿ
ನವೆಂಬರ್ 3ರಂದು ಚನ್ನಗಿರಿ ತಾಲೂಕಿನ ಬಯಲು ದಿಬ್ಬ ಗ್ರಾಮದಲ್ಲಿ ಹೊಲದಲ್ಲಿ ಎತ್ತು ಮೇಯಿಸುತ್ತಿದ್ದಾಗ ಕರಡಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ವ್ಯಕ್ತಿ ಸಾವು
ಇಲ್ಲಿ ಕಾಡಾನೆಗಳು, ಕರಡಿ, ಚಿರತೆಗಳು ಸಾಕಷ್ಟು ಬಾರಿ ಸಂಚಾರ ಮಾಡುವುದನ್ನು ಗ್ರಾಮಸ್ಥರರು ನೋಡಿದ್ದಾರೆ. ಇನ್ನು ಆನೆ ಕಂದಕ ಮತ್ತು ಚಿರತೆ ಸೆರೆಗೆ ಬಲೆ ಬೀಸುವಂತೆ ಬೋವಿ ಸಮಾಜದ ಪ್ರಮುಖರು ಒತ್ತಾಯಿಸಿದ್ದಾರೆ.
ಕರಡಿ ದಾಳಿಯಿಂದ ಮೃತಪಟ್ಟ ಮಂಜಪ್ಪನ ಕುಟುಂಬಕ್ಕೆ ಸರ್ಕಾರದಿಂದ 7.5 ಲಕ್ಷ ರೂ. ಪರಿಹಾರದ ಜೊತೆಗೆ ವೈದ್ಯಕೀಯ ವೆಚ್ಚವನ್ನು ಅರಣ್ಯ ಇಲಾಖೆಯಿಂದಲೆ ಭರಿಸಲಾಗುವುದು. ಅಲ್ಲದೇ ಮೃತನ ಪತ್ನಿಗೆ 2 ಸಾವಿರ ರೂ. ಮಾಸಾಶನ ನೀಡಲಾಗುವುದು ಎಂಬ ಭರವಸೆ ನೀಡಿದ ಕಾರಣಕ್ಕೆ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.