ದಾವಣಗೆರೆ: ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರ ಅಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಬೇರೆ ಪಕ್ಷಗಳ ವಿರುದ್ಧ ಇದರ ಬಗ್ಗೆ ದೂಷಣೆ ಮಾಡುವಂತಹದ್ದಲ್ಲ, ಬೇರೆ ಸರ್ಕಾರಗಳಿದ್ದಾಗ ಸರಿಯಾದ ಕಾಲುವೆ ವ್ಯವಸ್ಥೆ ಮಾಡದೇ ಇರುವುದರಿಂದ ಈ ಸಮಸ್ಯೆ ಆಗಿದೆ.
ಇನ್ನು ಟೌನ್ ಪ್ಲಾನ್ ಹಾಗೂ ಲೇಔಟ್ ಪ್ಲಾನ್ಗಳ ಅಪ್ರೂವ್ ಮಾಡುವ ವೇಳೆ ಬೇಕಾಬಿಟ್ಟಿ ಮಾಡಿದ್ದರಿಂದ ಶೇಖರಣೆಯಾಗಿರುವ ನೀರು ಹೊರ ಹೋಗಲು ಸಾಧ್ಯವಾಗಿಲ್ಲ. ಇಡಿ ರಸ್ತೆಗಳು ಕಾಂಕ್ರೀಟ್ ಮಯವಾಗಿದ್ದರಿಂದ ನೀರು ಕೂಡ ಹೀರಿಕೊಳ್ಳುವುದಿಲ್ಲ. ಅಕಾಲಿಕ ಮಳೆಯಾಗಿದ್ದರಿಂದ ಯಾರನ್ನು ದೂಷಿಸುವುದು ಸರಿ ಅಲ್ಲ ಇದಕ್ಕೆ ಎಲ್ಲರೂ ಹೊಣೆಯಾಗ ಬೇಕಾಗುತ್ತದೆ. ಇದಕ್ಕೆ ಸೂಕ್ತವಾದ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದರು.
ಕಾಮಲೆ ಕಣ್ಣಿಗೆ ಕಾಣುವುದೆಲ್ಲ ಹಳದಿನೇ:ಕೆಲಸ ಮಾಡ್ತಿದ್ದೇವೆ ನಾವ್ಯಾರು ಸಚಿವರು ಮನೆಯಲ್ಲಿ ಮಲ್ಕೊಂಡಿಲ್ಲ, ಕೂತ್ಕಂಡಿಲ್ಲ, ಕಾಂಗ್ರೆಸ್ ನಾಯಕರ ಕಣ್ಣು ಕಾಮಲೆಕಣ್ಣು, ಅದಕ್ಕೆ ನಾವು ಮಾಡುವ ಕೆಲಸ ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣಿಸುತ್ತಿಲ್ಲ , ಕಾಮಾಲೆಕಣ್ಣಿಗೆ ಜಗತ್ತೆಲ್ಲ ಕಾಣುವುದು ಹಳದಿನೇ.