ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ್ದು ಪೊಲೀಸರಲ್ಲ, ನರ್ಸಮ್ಮ! - ನರ್ಸ್ ಸೀಮಾ ಅವರು ಯುವಕರಿಗೆ ಬೆತ್ತದ ರುಚಿ

ಲಾಕ್​ಡೌನ್​ ಉಲ್ಲಂಘಿಸಿ ಮನೆಯಿಂದ ಹೊರಬಂದ ಪುಂಡರಿಗೆ ದಾವಣಗೆರೆಯಲ್ಲಿ ನರ್ಸ್‌ವೊಬ್ಬರು ರಸ್ತೆಯಲ್ಲಿ ಬಸ್ಕಿ ಹೊಡೆಸಿದ್ದಾರೆ.

Baskey punishment by nurse for violating the lockdown by youths
ಲಾಕ್ ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ್ದು ಪೊಲೀಸರಲ್ಲ, ನರ್ಸಮ್ಮ

By

Published : Apr 1, 2020, 5:17 PM IST

ದಾವಣಗೆರೆ:ಲಾಕ್‌ಡೌನ್ ಉಲ್ಲಂಘಿಸಿದ ಪುಂಡರಿಗೆ ಇಲ್ಲೊಬ್ಬರು ನರ್ಸ್ ಬೆತ್ತದ ರುಚಿ ತೋರಿಸಿ ರಸ್ತೆಯಲ್ಲಿ ಬಸ್ಕಿ ಹೊಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಮನೆಯಿಂದ ಯಾರೂ ಹೊರಬರಬಾರದು ಎಂದು ಮನವಿ ಮಾಡಿದ್ದರೂ ಯುವಕರು ಮಸ್ತಿಗಾಗಿ ರಸ್ತೆಯಲ್ಲಿ ಸುತ್ತಾಡುತ್ತಿದ್ದರು. ಇದನ್ನು ಕಂಡ ನರ್ಸ್ ಸೀಮಾ, ಯುವಕರಿಗೆ ಬಿಸಿ ಮುಟ್ಟಿಸಿದರು.
ಮನೆಯಿಂದ ತೆಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲಸಕ್ಕೆಂದು ಹೋಗುತ್ತಿರುವುದಾಗಿ ಹೇಳಿ ಬೇಕಾಬಿಟ್ಟಿಯಾಗಿ ಯುವಕರು ತಿರುಗಾಡುತ್ತಿದ್ದರು. ಮಾಸ್ಕ್ ಧರಿಸದೆ ಈ ರೀತಿ ತಿರುಗಾಡಿ ಅಪಾಯವನ್ನು ಆಹ್ವಾನಿಸುತ್ತಿರುವ ಯುವಕರನ್ನು ನೋಡಿರುವ ನರ್ಸ್‌ ಗರಂ ಆದರು.
ಕಳೆದ 10 ವರ್ಷಗಳಿಂದ ಇಲ್ಲಿ‌ ಕಾರ್ಯನಿರ್ವಹಿಸುತ್ತಿರುವ ನರ್ಸ್ ಸೀಮಾ ಅವರಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರಿದೆ. ಯಾರೇ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಹೋದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗಾಗಿ ಅವರು ಕೊಟ್ಟ ಶಿಕ್ಷೆ ಒಪ್ಪಿಕೊಂಡು ಅವರ ಮಾತು ಪಾಲಿಸುತ್ತೇವೆ.‌ ಅವ್ರು ನಮ್ಮ ಒಳ್ಳೆಯದಕ್ಕೆ ಹೇಳೋದು ಅಲ್ವಾ ಅಂತಾರೆ ಸ್ಥಳೀಯರು.

ABOUT THE AUTHOR

...view details