ದಾವಣಗೆರೆ: ಜನಪ್ರತಿನಿಧಿಗಳ ಮೇಲೆ ಐಟಿ ಇಡಿ ದಾಳಿ ಏಕೆ ಆಗಬಾರದು.? ನೀವು ಬೇಕಾದ್ದು ಮಾಡ್ತೀವಿ ಅಂದ್ರೆ ಇವತ್ತು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸ್ಪೀಕರ್ ಬಸವರಾಜ್ ಹೊರಟ್ಟಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ನಡೆದ ಐಟಿ ಇಡಿ ದಾಳಿಯನ್ನು ಸಮರ್ಥಿಸಿಕೊಂಡರು.
ಇಡಿ ದಾಳಿ ಕುರಿತು ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ದಾಳಿ ಮಾಡಿದ್ರೆ ಏನು ತೊಂದರೆ ಇಲ್ಲ, ನಮ್ಮ ಮನೆ ಮೇಲೆ ರೈಡ್ ಮಾಡ್ಲಿ ಬಿಡಿ ಯಾವ್ ತಕರಾರ್ ಇಲ್ಲ, ನಾವು ಮಾಡಿದ್ದೆಲ್ಲ ಸರಿ ಎನ್ನುವವರ ಮೇಲೆ ದಾಳಿ ನಡೆದಿದೆ. ದಾಳಿ ಮಾಡುವವರು ಯೋಗ್ಯವಾದರ ಮೇಲೆ ದಾಳಿಮಾಡಲಿ ಎಂದರು.
ಶಾಲೆ ಪ್ರಾರಂಭಕ್ಕಾಗಿ ಸರ್ಕಾರಕ್ಕೆ ಪಾಠ ಮಾಡಿದ ಹೊರಟ್ಟಿ: ಶಾಲೆಗಳನ್ನು ಪ್ರಾರಂಭಿಸುವಂತೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಅಧಿಕಾರಿಗಳು ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಇದೇ ರೀತಿ ಶಾಲೆಗಳು ಬಂದ್ ಅಗಲಿ ಎನ್ನುವ ಮನೋಭಾವಕ್ಕೆ ಬಂದಿದ್ದಾರೆ. ಒಂದು ದಿನ ಒಂದೊಂದು ತರಗತಿಗಳಿಗೆ ಮಾತ್ರ ಅವಕಾಶ ನೀಡಿದರೆ ಒಳ್ಳೆಯದು ಎಂದರು. ಅಲ್ಲದೇ ಕೋವಿಡ್ಗೆ ಬಲಿಯಾದ ಶಿಕ್ಷಕರಿಗೆ 5ಲಕ್ಷ ರೂ. ಪರಿಹಾರ ಕೊಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ನೂತನ ಸರ್ಕಾರದಲ್ಲಿ 15 ಜಿಲ್ಲೆಗಳಿಗೆ ಪ್ರಾಧಾನ್ಯತೆ ನೀಡಿಲ್ಲ:ಸಂಪುಟ ರಚನೆಗೆ ಅವರದ್ದೇ ತೊಂದರೆ, ಸಮಸ್ಯೆಗಳಿವೆ. ಸಭಾಪತಿ ಆಗಿ ನಾನು ಮಾತನಾಡಲು ಬರುವುದಿಲ್ಲ. ಎಲ್ಲ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿದ್ದರೆ ಒಳ್ಳೆಯದು. ಸಿಎಂ ಬೊಮ್ಮಯಿ ಮಾಜಿ ಪ್ರಧಾನಿ ದೇವೇಗೌಡ ಭೇಟಿ ಮಾಡಿರುವ ವಿಚಾರ ಅವರ ವೈಯಕ್ತಿಕ ಸಂಬಂಧ ಎಂದರು.