ಕರ್ನಾಟಕ

karnataka

ETV Bharat / state

ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಲ್ಲ, ಕುಡಿಸುವ ಹಬ್ಬ.. ಮಕ್ಕಳಲ್ಲೇ ದೇವರನ್ನ ಕಂಡ ಬಸವಪ್ರಭು ಶ್ರೀಗಳು..

ವಿರಕ್ತಮಠದಲ್ಲಿಂದು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಬಸವಪ್ರಭು ಶ್ರೀ ಹಾಲನ್ನು ನೀಡಿದರು. ಈ ಮೂಲಕ ಮೂಢನಂಬಿಕೆಯಿಂದ ಹೊರ ಬಂದು ವೈಚಾರಿಕತೆ ಅಳವಡಿಸಿಕೊಳ್ಳುವಂತೆ ಸಂದೇಶ ಸಾರಿದರು..

basavaprabhu-shri-talk-about-nagarapanchami
ಬಡಮಕ್ಕಳಿಗೆ ಹಾಲು ನೀಡಿದ ಬಸವಪ್ರಭು ಶ್ರೀ

By

Published : Aug 13, 2021, 6:42 PM IST

Updated : Aug 13, 2021, 7:26 PM IST

ದಾವಣಗೆರೆ :ಧರ್ಮದ, ದೇವರ ಹೆಸರಿನಲ್ಲಿ ಹಾಲು ಚೆಲ್ಲುವ ಬದಲು, ಅದನ್ನು ಮಕ್ಕಳಿಗೆ, ಹಿರಿಯರಿಗೆ, ಬಡವರಿಗೆ ನೀಡುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕು ಎಂದು ನಾಡಿನ ಸಮಸ್ತ ಜನರಲ್ಲಿ ವಿರಕ್ತಮಠದ ಬಸವಪ್ರಭು ಶ್ರೀ ಮನವಿ ಮಾಡಿದ್ದಾರೆ.

ಮಕ್ಕಳಲ್ಲೇ ದೇವರನ್ನ ಕಂಡ ಬಸವಪ್ರಭು ಶ್ರೀಗಳು..

ಈ ಕುರಿತು ಮಾತನಾಡಿದ ಅವರು, ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತ ಬಂದಿದೆ. ಹಬ್ಬ-ಹರಿದಿನಗಳಲ್ಲಿ ವಿಶಿಷ್ಟ ಆಚರಣೆಗಳನ್ನು ನೆರವೇರಿಸುತ್ತಿದೆ. ಕಲ್ಲಿನ ನಾಗರಹಾವಿಗೆ ಇಲ್ಲವೇ, ಮಣ್ಣಿನ ನಾಗರಹಾವಿಗೆ ಹಾಲು ಎರೆಯುವ ಬದಲು ಬಡ ಮಕ್ಕಳಿಗೆ ಹಾಲುಣಿಸಿ ಎಂದು ಅವರು ಕರೆ ನೀಡಿದರು‌.

ವಿರಕ್ತ ಮಠದಲ್ಲಿ ಸರಿ ಸುಮಾರು 30 ವರ್ಷದಿಂದ ಈ ಪದ್ಧತಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಕೂಡ ಸಾಕಷ್ಟು ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ವೈಚಾರಿಕೆತೆಯನ್ನು ಹರಡಲಾಗಿದೆ. ಸಾಮಾನ್ಯವಾಗಿ ಹಾವು ಹಾಲನ್ನು ಸೇವಿಸುವುದಿಲ್ಲ. ಜನರು ಹುತ್ತಕ್ಕೆ ಎರೆಯುವ ಹಾಲು ಮಣ್ಣು ಪಾಲಾಗುತ್ತದೆ. ಹಾಗಾಗಿ, ಇದನ್ನು ವೈಚಾರಿಕಾ ದೃಷ್ಟಿಕೋನದಿಂದ ಆಚರಿಸಿ ಎಂದರು.

ವಿರಕ್ತಮಠದಲ್ಲಿಂದು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಬಸವಪ್ರಭು ಶ್ರೀ ಹಾಲನ್ನು ನೀಡಿದರು. ಈ ಮೂಲಕ ಮೂಢನಂಬಿಕೆಯಿಂದ ಹೊರ ಬಂದು ವೈಚಾರಿಕತೆ ಅಳವಡಿಸಿಕೊಳ್ಳುವಂತೆ ಸಂದೇಶ ಸಾರಿದರು.

ಓದಿ:ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ: ಕಠಿಣ ಕ್ರ‌ಮಕ್ಕೆ ಸ್ಪೀಕರ್ ಕಾಗೇರಿ ಆಗ್ರಹ

Last Updated : Aug 13, 2021, 7:26 PM IST

ABOUT THE AUTHOR

...view details