ಕರ್ನಾಟಕ

karnataka

ETV Bharat / state

ಸ್ಮಶಾನವಿಲ್ಲದೆ ಪರದಾಟ... ಗ್ರಾಮ ಪಂಚಾಯತಿ ಮುಂಭಾಗ ಶವವಿಟ್ಟು ಪ್ರತಿಭಟನೆ

ಶವ ಹೂಳಲು ಜಾಗವಿಲ್ಲದ ಕಾರಣ ಸಿಟ್ಟಿಗೆದ್ದ ಕುಟುಂಬಸ್ಥರು ಹಾಗೂ ಸಂಬಂಧಿಕರು, ಗ್ರಾಮ‌ ಪಂಚಾಯಿತಿ ಮುಂಭಾಗ ಶವವಿಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

basavanahalli-villagers-protest-in-front-of-gram-panchayat
ಸ್ಮಶಾನವಿಲ್ಲದೆ ಪರದಾಟ...ಗ್ರಾಮ ಪಂಚಾಯತಿ ಮುಂಭಾಗ ಶವವಿಟ್ಟು ಪ್ರತಿಭಟನೆ

By

Published : Dec 28, 2020, 5:07 PM IST

ದಾವಣಗೆರೆ:ರುದ್ರಭೂಮಿ ಇಲ್ಲದ ಹಿನ್ನೆಲೆ, ಗ್ರಾಮ‌ ಪಂಚಾಯಿತಿ ಮುಂಭಾಗ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸ್ಮಶಾನವಿಲ್ಲದೆ ಪರದಾಟ...ಗ್ರಾಮ ಪಂಚಾಯತಿ ಮುಂಭಾಗ ಶವವಿಟ್ಟು ಪ್ರತಿಭಟನೆ

ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರ್ ಎಂಬುವರು ಇಂದು ಮೃತಪಟ್ಟಿದ್ದರು. ಶವ ಹೂಳಲು ಜಾಗವಿಲ್ಲದ ಕಾರಣ ಸಿಟ್ಟಿಗೆದ್ದ ಕುಟುಂಬಸ್ಥರು ಹಾಗೂ ಸಂಬಂಧಿಕರು ಗ್ರಾಮ‌ ಪಂಚಾಯಿತಿ ಮುಂಭಾಗ ಶವವಿಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದರು.

ಈ ವೇಳೆ ಸ್ಥಳಕ್ಕೆ ನ್ಯಾಮತಿ ತಹಶೀಲ್ದಾರ್ ಹಾಗೂ ಇಓ ಭೇಟಿ ನೀಡಿ ಮನವೊಲಿಸಲು ಮುಂದಾಗಿದ್ದು, ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಹಠ ಹಿಡಿದರು. ಇನ್ನೂ ಗ್ರಾಮ ಪಂಚಾಯಿತಿ ಚುನಾವಣೆ ಕೌಂಟಿಂಗ್ ಆದ ನಂತರದಲ್ಲಿ ರುದ್ರಭೂಮಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಂಡು ರುದ್ರಭೂಮಿಗೆ ಜಾಗ ನೀಡುವುದಾಗಿ ಅಧಿಕಾರಿಗಳು ಹಾಗೂ ನ್ಯಾಮತಿ ಪೊಲೀಸರು ಭರವಸೆ ನೀಡಿದ್ದರಿಂದ ಶವ ಬೇರೆ ಕಡೆ ಸಾಗಿಸಲಾಯಿತು.

ಹಲವಾರು ವರ್ಷಗಳಿಂದ‌ ಬಸವನಹಳ್ಳಿ ಗ್ರಾಮದಲ್ಲಿ ರುದ್ರಭೂಮಿಗೆ ಜಾಗ ಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈ ಹಿಂದೆಯೂ ಕೂಡ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ರುದ್ರಭೂಮಿ ಸಮಸ್ಯೆ ಉಂಟಾಗುತ್ತಿತ್ತು.

ABOUT THE AUTHOR

...view details