ಕರ್ನಾಟಕ

karnataka

ETV Bharat / state

'ಸಂಕ್ರಾಂತಿಗೆ ಬೇವು ಬೆಲ್ಲ ಇಲ್ಲವೇ, ಬಸವ ಜಯಂತಿಗೆ ಸಿಎಂ ಹೋಳಿಗೆ ಸೀಕರಣೆ ತಿನ್ನಿಸುವ ನಂಬಿಕೆ ಇದೆ' - ದಾವಣಗೆರೆಯಲ್ಲಿ 2a ಮೀಸಲಾತಿ ಕುರಿತು ಬಸವ ಜಯಮೃತ್ಯುಂಜಯ ಶ್ರೀ ಹೇಳಿಕೆ

ಸೆ.15 ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಡೆಡ್‌ಲೈನ್ ನೀಡಿತ್ತು. ಅದ್ರೆ ಇದೀಗ ಶಾಸಕರ ಸಭೆ ಕರೆದು ಸಿಎಂ ಬೊಮ್ಮಾಯಿಯವರು ಚರ್ಚೆ ನಡೆಸಿದ್ದಾರೆ. ಜನವರಿ 14 ರಂದು ಅವರು ಮೀಸಲಾತಿ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದರು.

ಬಸವ ಜಯಮೃತ್ಯುಂಜಯ ಶ್ರೀ
ಬಸವ ಜಯಮೃತ್ಯುಂಜಯ ಶ್ರೀ

By

Published : Jan 3, 2022, 5:58 PM IST

ದಾವಣಗೆರೆ:ನಮ್ಮ ಬೇಡಿಕೆಗೆ ಸ್ಪಂದಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರು ನಮಗೆ ಸಂಕ್ರಾಂತಿಗೆ ಬೇವು ಬೆಲ್ಲ ಇಲ್ಲವೇ, ಬಸವ ಜಯಂತಿಗೆ ಹೋಳಿಗೆ ಸೀಕರಣೆ ತಿನ್ನಿಸುವ ನಂಬಿಕೆ ಇದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ 2ಎ ಮೀಸಲಾತಿ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.


ನಗರದಲ್ಲಿಂದು ಮಾತನಾಡಿದ ಅವರು, ನಾವು ಯಾವ ಯಾವ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದೇವೆ ಎಂಬುದು ನಮಗೆ ಗೊತ್ತಿದೆ. ಜನವರಿ 14 ರಂದು ನಡೆಯಲಿರುವ ಕೂಡಲ ಸಂಗಮ ಶ್ರೀಗಳ ಪಾದಯಾತ್ರೆಯ ವರ್ಷಾಚರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸಿಎಂ ಬಂದೇ ಬರ್ತಾರೆ. ನಮಗೆ ಸಿಹಿ ಸುದ್ದಿ ನೀಡುವ ಬಗ್ಗೆ ಗೊತ್ತಿದೆ. ಈಗಾಗಲೇ ದಾವಣಗೆರೆಯಿಂದ ಸಮೀಕ್ಷೆ ಆರಂಭವಾಗಿದೆ, ಕೆಲವೇ ದಿನಗಳಲ್ಲಿ ನಮಗೆ ಮೀಸಲಾತಿ ಸಿಗಲಿದೆ ಎಂದರು.

ಕುಲಶಾಸ್ತ್ರ ಅಧ್ಯಯನ ಅಗತ್ಯ ಇಲ್ಲ:

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಾವುದೇ ಕುಲಶಾಸ್ತ್ರ ಅಧ್ಯಯನದ ಅವಶ್ಯಕತೆ ಇಲ್ಲ. ಬದಲಾಗಿ, ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳ ಆಯೋಗ ಮಾತ್ರ ಮೀಸಲಾತಿ ನೀಡುವ ವರದಿ ನೀಡಬೇಕಾಗಿದೆ. ಸೆ 15 ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಡೆಡ್‌ಲೈನ್ ನೀಡಿತ್ತು. ಆದ್ರೆ, ಇದೀಗ ಶಾಸಕರ ಸಭೆ ಕರೆದು ಸಿಎಂ ಬೊಮ್ಮಾಯಿಯವರು ಚರ್ಚೆ ನಡೆಸಿದ್ದಾರೆ. ಜನವರಿ 14 ರಂದು ಮೀಸಲಾತಿ ಘೋಷಣೆ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.

ಮೂರು ತಿಂಗಳ ಕಾಲ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿದೆ:

ಮೂರು ತಿಂಗಳ ಕಾಲ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿದೆ ಎಂದು ನಾವು ಸುಮ್ಮನೆ ಕೂತಿಲ್ಲ, ನೀತಿಸಂಹಿತೆ ನೆಪವೊಡ್ಡಿ ಮುಂದೆ ಹಾಕಿಕೊಂಡು ಹೋಗಿದ್ದರು. ಸುವರ್ಣ ಸೌಧದಲ್ಲಿ ನಾವು ಸಮಾಜದ ಶಾಸಕರು, ಸಚಿವರು ಸಿಎಂ ಭೇಟಿ ಮಾಡಿದ್ದೆವು. ಆಯೋಗ ವರದಿ ತಯಾರು ಮಾಡುತ್ತಿದೆ, ಆದಷ್ಟು ಬೇಗ ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದರು. ಇದೇ ತಿಂಗಳ 14 ರಂದು ನಡೆಯುವ ಕಾರ್ಯಕ್ರಮದಲ್ಲಿ ನಾವು ಮತ್ತೊಮ್ಮೆ ಹಕ್ಕೊತ್ತಾಯ ಮಾಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.

For All Latest Updates

TAGGED:

ABOUT THE AUTHOR

...view details