ಕರ್ನಾಟಕ

karnataka

ETV Bharat / state

'2A ಮೀಸಲಾತಿಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗ ಹಿಡಿದು ಕುಳಿತು ಹೋರಾಟ' - 2A ಮೀಸಲಾತಿಗಾಗಿ ಹೋರಾಟ

2A reservation: ನವೆಂಬರ್ 10 ರಂದು ದಾವಣಗೆರೆಯ ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮಾಡುವ ಮುಖಾಂತರ 2A ಮೀಸಲಾತಿಗಾಗಿ ಹೋರಾಟ ಆರಂಭಿಸಲಾಗುವುದು ಎಂದು ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದರು.

Basava Jaya Mruthyunjaya Shri
ಬಸವ ಜಯಮೃತ್ಯುಂಜಯ ಶ್ರೀ

By ETV Bharat Karnataka Team

Published : Nov 8, 2023, 2:08 PM IST

ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಶ್ರೀ

ದಾವಣಗೆರೆ: 2ಎ ಮೀಸಲಾತಿ ಮತ್ತು ಲಿಂಗಾಯತ ಉಪಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಏಳನೇ ಹಂತದ ಹೋರಾಟ ದಾವಣಗೆರೆಯಲ್ಲಿ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮಾಡುವ ಮುಖಾಂತರ ಹೋರಾಟ ಆರಂಭಿಸಲಾಗುವುದು ಎಂದು ಬಸವ ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್ 10ರಂದು ದಾವಣಗೆರೆಯ ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹೋರಾಟ ಮಾಡುವ ಮೂಲಕ 2A ಮೀಸಲಾತಿ, ಲಿಂಗಾಯತ ಉಪಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಲಾಗುವುದು. ಮೀಸಲಾತಿ ನೀಡಲು ಸರ್ಕಾರಗಳು ಮೀನಮೇಷ ಎಣಿಸುತ್ತಿವೆ. ಅದ್ದರಿಂದ, ವಿನೂತನ ಹೋರಾಟದ ಮೂಲಕ ಕಣ್ತೆರೆಸುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ ಮುನ್ನ ನಮಗೆ 2A ಮೀಸಲಾತಿ ಲಭಿಸಬೇಕು, ಇಲ್ಲವಾದರೆ ಶಕ್ತಿ ಪ್ರದರ್ಶನ : ಜಯಮೃತ್ಯುಂಜಯ ಸ್ವಾಮೀಜಿ

ಈ ಹೋರಾಟದಲ್ಲಿ ಯತ್ನಾಳ್, ವಿಜಯನಂದ ಕಾಶಪ್ಪನವರ್, ಅರವಿಂದ್ ಬೆಲ್ಲದ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.‌ ನಮಗೆ ಬಿಜೆಪಿ ಸರ್ಕಾರದ ಅವಧಿಯ ಕೊನೆಗಳಿಗೆಯಲ್ಲಿ 2ಡಿ ಮೀಸಲಾತಿ ಕೊಟ್ಟರು. ಆದರೆ, ಅದು ಕೂಡ ಕಾರಣಾಂತರಗಳಿಂದ ಜಾರಿಯಾಗಲಿಲ್ಲ, ನಾನಾ ನಾಯಕರು, ಜನಪ್ರತಿನಿಧಿಗಳು ಸಿಎಂಗೆ ಮನವಿ ಮಾಡಿದ್ದರಿಂದ ಹಕ್ಕೊತ್ತಾಯ ಮಾಡಿದರು. ನಮ್ಮ ಸಮಾಜದ ಹಾಲಿ, ಮಾಜಿ ಶಾಸಕರ ಸಭೆ ಕರೆದು ಮಾತನಾಡುವೆ ಎಂದು ಭರವಸೆ ಕೊಟ್ಟಿದ್ದರು. ಅದರೆ, ಇಲ್ಲಿಯತನಕ ಯಾವುದೇ ಅಭಿವೃದ್ಧಿ ಆಗಿಲ್ಲ, ಅದ್ದರಿಂದ ಸರ್ಕಾರದ ವಿರುದ್ಧ ಇಷ್ಟಲಿಂಗ ಪೂಜೆ ಹೋರಾಟ (ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಕೈಯಲ್ಲಿ ಲಿಂಗ ಹಿಡಿದು) ಮಾಡಲಾಗುವುದು.‌ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದಲ್ಲಿ 30 ಜಿಲ್ಲೆಯಲ್ಲಿ ಹೋರಾಟ ಜಾರಿಯಾಗಲಿದೆ ಎಂದು ಹೇಳಿದರು.‌

ಇದನ್ನೂ ಓದಿ:2 ಎ ಮೀಸಲಾತಿಗೆ ಒತ್ತಾಯಿಸಿ ನ. 10ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ : ಬಸವ ಜಯಮೃತ್ಯುಂಜಯ ಶ್ರೀ

ಹೋರಾಟಕ್ಕೆ ತಾಂಬೂಲ ಕೊಟ್ಟು ಕರೆಯುವ ಅವಶ್ಯಕತೆ ಇಲ್ಲ:ಈ ವೇಳೆ ಮಾತನಾಡಿದ ಹರಿಹರದ ಮಾಜಿ ಶಾಸಕ ಶಿವಶಂಕರ್, ಹೋರಾಟಕ್ಕೆ ತಾಂಬೂಲ ಕೊಟ್ಟು ಯಾರನ್ನೂ ಕರೆಯುವ ಅವಶ್ಯಕತೆ ಇಲ್ಲ, ಇದು ಸಮಾಜದ ಕೆಲಸ ಆಗಿದ್ದರಿಂದ ಬರಬಹುದು, ಅವರ ಜವಾಬ್ದಾರಿ ಇದೆ. ಸಮಾಜಕ್ಕೆ ಅವರನ್ನು ಅರ್ಪಣೆ ಮಾಡಿಕೊಳ್ಳಲಿ. ಸ್ವಾಭಿಮಾನಿ ಪಂಚಮಸಾಲಿಗಳು ಹೋರಾಟದಲ್ಲಿ ಭಾಗಿಯಾದರೆ ಅವರು ಸಮಾಜದ ಋಣ ತೀರಿಸಿದಂತಾಗುತ್ತದೆ. ಜಾತ್ರೆ ಮಾಡುವವರು ಮಾಡಿಕೊಳ್ಳಲಿ, ನಾವು ಹೋರಾಟಕ್ಕೆ ನಾಂದಿ ಹಾಡ್ತೀವೆ. ಸರ್ಕಾರ ಮೀಸಲಾತಿ ಕೊಡುವಲ್ಲಿ ತಾರತಮ್ಯ ಮಾಡ್ತಿದೆ. ಇದನ್ನು ಬಿಡಬೇಕು, ಇಲ್ಲವಾದಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ಏನು ಎಂಬುದನ್ನು ತೋರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಮೀಸಲಾತಿ : ಶೇ.50ರಿಂದ 75ಕ್ಕೆ ಹೆಚ್ಚಿಸಲು ಬಿಹಾರ ಸಚಿವ ಸಂಪುಟ ಒಪ್ಪಿಗೆ

ABOUT THE AUTHOR

...view details