ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಚನ್ನಗಿರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಕೊರೊನಾ ಭೀತಿ ಹಿನ್ನೆಲೆ: ಚನ್ನಗಿರಿಯಲ್ಲಿ ಭೈರತಿ ಬಸವರಾಜ್ ಸಭೆ - ಕೋವಿಡ್ ಪ್ರಗತಿ ಪರಿಶೀಲನಾ ಸಭೆ
ಚನ್ನಗಿರಿ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನೇತೃತ್ವದಲ್ಲಿ, ಕೋವಿಡ್ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
![ಕೊರೊನಾ ಭೀತಿ ಹಿನ್ನೆಲೆ: ಚನ್ನಗಿರಿಯಲ್ಲಿ ಭೈರತಿ ಬಸವರಾಜ್ ಸಭೆ ಚನ್ನಗಿರಿಯಲ್ಲಿ ಭೈರತಿ ಬಸವರಾಜ್ ಸಭೆ](https://etvbharatimages.akamaized.net/etvbharat/prod-images/768-512-6879234-30-6879234-1587454585691.jpg)
ಚನ್ನಗಿರಿಯಲ್ಲಿ ಭೈರತಿ ಬಸವರಾಜ್ ಸಭೆ
ಚನ್ನಗಿರಿ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ , ಸಂಸದ ಜಿ. ಎಂ. ಸಿದ್ದೇಶ್ವರ ಭಾಗಿಯಾಗಿದ್ದರು. ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ 3 ಲಕ್ಷ ಮಾಸ್ಕ್ ಹಾಗೂ ಬಡವರು, ನಿರ್ಗತಿಕರಿಗೆ ಇದೇ ವೇಳೆ ಆಹಾರಧಾನ್ಯದ ಕಿಟ್ ವಿತರಣೆ ಮಾಡಲಾಯಿತು.