ದಾವಣಗೆರೆ:ಸರ್ಕಾರಿ ನೌಕರರ ಸಂಘದ ಮೂರು ಸ್ಥಾನಗಳಿಗೆ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಚುನಾವಣೆ ನಡೆದಿದ್ದು, ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಿ.ಪಾಲಾಕ್ಷಿ ಆಯ್ಕೆಗೊಂಡಿದ್ದಾರೆ.
ನೌಕರರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಪಾಲಾಕ್ಷಿ ಆಯ್ಕೆ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಗರದ ಸೀತಮ್ಮ ಕಾಲೇಜಿನ ಬಿ.ಪಾಲಾಕ್ಷಿ ಹಾಗೂ ಬಿ.ಶ್ರೀನಿವಾಸ್ ನಾಯಕ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 39 ಮತಗಳನ್ನು ಪಡೆದ ಪಾಲಾಕ್ಷಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡರು.
ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಿ ಪಾಲಾಕ್ಷಿ ಆಯ್ಕೆ
ಚುನಾವಣೆಯಲ್ಲಿ 66 ನಿರ್ದೇಶಕರು ಮತದಾನ ಮಾಡಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಗರದ ಸೀತಮ್ಮ ಕಾಲೇಜಿನ ಬಿ.ಪಾಲಾಕ್ಷಿ ಹಾಗೂ ಬಿ.ಶ್ರೀನಿವಾಸ್ ನಾಯಕ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 39 ಮತಗಳನ್ನು ಪಡೆದ ಪಾಲಾಕ್ಷಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡರು.
ಶ್ರೀನಿವಾಸ್ ನಾಯಕ್ 27 ಮತ ಪಡೆಯುವ ಮೂಲಕ ಪರಾಭವಗೊಂಡರು. ಉಳಿದಂತೆ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಎನ್.ಮಾರುತಿ, ಖಜಾಂಚಿ ಸ್ಥಾನಕ್ಕೆ ಆರ್.ರವಿ ಆಯ್ಕೆಗೊಂಡಿದ್ದಾರೆ.