ಕರ್ನಾಟಕ

karnataka

ETV Bharat / state

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಎಸ್​ಪಿ ಅಭಿನಂದನೆ - davangere

ಆಟೋ ಚಾಲಕ ಜಗದೀಶ್ ಎಂಬುವರಿಗೆ ಹಣ ಹಾಗೂ ಚಿನ್ನವಿರುವ ಪರ್ಸ್ ಸಿಕ್ಕಿದ್ದು, ಅದನ್ನು ಹತ್ತಿರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕನ ಈ ಪ್ರಾಮಾಣಿಕತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ್ದಾರೆ.

davangere
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಎಸ್​ಪಿ ಅಭಿನಂದನೆ

By

Published : Apr 10, 2021, 5:34 PM IST

ದಾವಣಗೆರೆ:ತನಗೆ ಸಿಕ್ಕ15 ಗ್ರಾಂ ಚಿನ್ನಾಭರಣ ಹಾಗೂ 2508 ರೂ. ನಗದು ಒಳಗೊಂಡ ಪರ್ಸ್‌ನ್ನು ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ‌ ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿ ನಡೆದಿದೆ.

ಆಟೋ ಚಾಲಕ ಜಗದೀಶ್ ಎಂಬುವರಿಗೆ ಹಣ ಹಾಗೂ ಚಿನ್ನವಿರುವ ಪರ್ಸ್ ಸಿಕ್ಕಿದ್ದು, ಅದನ್ನು ಹತ್ತಿರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕನಿಂದ ಪರ್ಸ್ ಸ್ವೀಕರಿಸಿದ ಪೊಲೀಸರು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಿದ್ದಾರೆ. ಆದರೆ ಪರ್ಸ್​ನ ವಾರಸುದಾರರು ಯಾರೆಂಬ ಮಾಹಿತಿ ತಿಳಿದು ಬಂದಿಲ್ಲ.

ಆಟೋ ಚಾಲಕನ ಈ ಪ್ರಾಮಾಣಿಕತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸನೀಯ ಪತ್ರ ನೀಡಿ ತಮ್ಮ ಕಚೇರಿಯಲ್ಲಿ ಗೌರವಿಸಿದ್ದಾರೆ. ಈಗಿನ ಕಾಲದಲ್ಲಿಯೂ ಪ್ರಾಮಾಣಿಕ ಆಟೋ ಚಾಲಕರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details