ಹರಿಹರ: ನಿಲುಗಡೆ ಮಾಡುವಾಗ ಆಟೋ ಹರಿದು ಚಾಲಕ ಮೃತಪಟ್ಟ ಘಟನೆ ನಗರದ ಹಳೆ ಪಿ.ಬಿ. ರಸ್ತೆ ಜಯಶ್ರೀ ಟಾಕೀಸ್ ಬಳಿ ನಡೆದಿದೆ.
ಜಾರದಿರಲಿ ಎಂದು ಟೈರಿಗೆ ಕಲ್ಲಿಟ್ಟ ಚಾಲಕನ ಮೇಲೇ ಹರಿಯಿತು ಆಟೋ: ಸ್ಥಳದಲ್ಲೇ ದಾರುಣ ಸಾವು - Auto driver death at Harihara
ಆಟೋ ಇಳಿ ಜಾರಿಗೆ ಜಾರದಿರಲಿ ಎಂದು ಹಿಂದಿನ ಚಕ್ರಕ್ಕೆ ಕಲ್ಲುಇಡುವಾಗ ಇದ್ದಕ್ಕಿಂದ್ದಂತೆ ಹಿಂದಕ್ಕೆ ಚಲಿಸಿದೆ. ಇಳಿಜಾರು ಇದ್ದಿದ್ದರಿಂದ ಆಟೋ ಗುಡ್ಡಪ್ಪನನ್ನು ನೂಕುತ್ತ ಜಯಶ್ರೀ ಟಾಕೀಸ್ ಕಾಂಪೌಂಡ್‌ವರೆಗೆ ಹೋಗಿದೆ. ಘಟನೆಯಲ್ಲಿ ಗುಡ್ಡಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಹನಗವಾಡಿ ಗ್ರಾಮದ ಗುಡ್ಡಪ್ಪ (55) ಮೃತ. ತನ್ನದೆ ಸ್ವಂತ ಲಗೇಜ್ ಅಪೆ ಆಟೋದೊಂದಿಗೆ ಬಾಡಿಗೆ ಮಾಡುತ್ತಿದ್ದ ಗುಡ್ಡಪ್ಪ, ಬಾಡಿಗೆಗಾಗಿ ಜಯಶ್ರೀ ಟಾಕೀಸ್ ಮುಂಭಾಗದ ತೆಂಬದಲ್ಲಿ ಆಟೋ ನಿಲ್ಲಿಸುತ್ತಿದ್ದರು. ಎಂದಿನಂತೆ ಆಟೋ ಪಾರ್ಕ್ ಮಾಡಿ, ನಂತರ ಆಟೋ ಇಳಿ ಜಾರಿಗೆ ಜಾರದಿರಲಿ ಎಂದು ಹಿಂದಿನ ಚಕ್ರಕ್ಕೆ ಕಲ್ಲುಇಡುವಾಗ ಇದ್ದಕ್ಕಿಂದ್ದಂತೆ ಹಿಂದಕ್ಕೆ ಚಲಿಸಿದೆ. ಇಳಿಜಾರು ಇದ್ದಿದ್ದರಿಂದ ಆಟೋ ಗುಡ್ಡಪ್ಪನನ್ನು ನೂಕುತ್ತ ಜಯಶ್ರೀ ಟಾಕೀಸ್ ಕಾಂಪೌಂಡ್‌ವರೆಗೆ ಹೋಗಿದೆ. ಘಟನೆಯಲ್ಲಿ ಗುಡ್ಡಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.