ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೂರಿಗಾಗಿ ಆಸೆ ಪಡುತ್ತಿರುವ ಬಡ ಜನರನ್ನು ಬಂಡವಾಳ ಮಾಡಿಕೊಂಡಿರುವ ಬ್ರೋಕರ್ಗಳು ಒಂದು ಅರ್ಜಿ ಹಾಕಲು ನಾಲ್ಕೈದು ಸಾವಿರ ಕೀಳಲು ದಂಧೆಗಿಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೀಗ ಬ್ರೋಕರ್ಗಳ ದಂಧೆಗಿಳಿದು ಅರ್ಜಿ ಹಾಕಲು ಜನರೊಂದಿಗೆ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈಗಾಗಲೇ ದೂಡಾ ನಿವೇಶನಗಳ ಬೇಡಿಕೆ ಸಮಿಕ್ಷೇ ನಡೆಸುತ್ತಿದ್ದು, ನಿವೇಶನಕ್ಕಾಗಿ ಅರ್ಜಿ ಕರೆದಿದೆ. ಅರ್ಜಿ ಹಾಕಲು ಜನ ಮುಗಿ ಬಿದ್ದಿದ್ದಾರೆ. ಇನ್ನು ಸರದಿ ಸಾಲಲ್ಲಿ ನಿಲ್ಲದೆ ಅರ್ಜಿ ಹಾಕಲು ಜನರಿಂದ ಬ್ರೋಕರ್ಗಳು ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದು, ಅರ್ಜಿ ಹಾಕಲು 4-5 ಸಾವಿರ ತನಕ ಹಣ ಕೀಳುತ್ತಿದ್ದಾರೆ.
ಅರ್ಜಿದಾರರು ಬಾರದಿದ್ದರೂ ದಾಖಲೆ ನೀಡಿ ಹಣ ಕೊಟ್ಟರೆ ಸಾಕು, ಅವರ ಹೆಸರಿನಲ್ಲಿ ಬ್ರೋಕರ್ಗಳು ಹಾಗೂ ಅಲ್ಲಿನ ಅಧಿಕಾರಿಗಳ ಮೂಲಕ ಸಲ್ಲಿಕೆಯಾಗಿರುತ್ತದೆಯಂತೆ.