ದಾವಣಗೆರೆ:ಹರಿಹರದ ಜನತಾ ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಭೂ ಅಭಿವೃದ್ಧಿ ನಿಯಮಿತ ಬ್ಯಾಂಕಿನ 7 ಲಕ್ಷ ಹಣವಿದ್ದ ಟ್ರಜರಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹರಿಹರದ ಪಿ.ಬಿ ರಸ್ತೆಯ ಪಕ್ಕದಲ್ಲಿರುವ ಒಂದೇ ಕಟ್ಟಡದಲ್ಲಿದ್ದ ಈ ಎರಡೂ ಬ್ಯಾಂಕಿಗೆ ಖದೀಮರು ಮಂಗಳವಾರ ರಾತ್ರಿ ಬ್ಯಾಂಕ್ ಮೇಲ್ಭಾಗದ ಕದವನ್ನು ಒಡೆದು ಒಳ ನುಸುಳಿದ್ದಾರೆ. ಜನತಾ ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ನಗದು ಹಣವನ್ನು ದೋಚಿಕೊಂಡ ಕಳ್ಳರು, ಮೇಲ್ಭಾಗದ ಪಿ.ಎಲ್.ಡಿ ಬ್ಯಾಂಕಿನ ಬಾಗಿಲು ಮುರಿದು 7 ಲಕ್ಷ ಇದ್ದ ಟ್ರಜರಿಯನ್ನು ಎತ್ತಿಕೊಂಡು ಮೇಲ್ಛಾವಣಿಗೆ ತೆರಳುವ ವೇಳೆ ಟ್ರಜರಿ ಸಿಲಿಕಿಕೊಂಡ ಕಾರಣ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.