ಕರ್ನಾಟಕ

karnataka

ETV Bharat / state

ಯುವತಿಗೆ ಸಂದೇಶ ಕಳುಹಿಸಿದ ಆರೋಪ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ - ದಲಿತ ಯುವಕನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ

ಗಣೇಶ (20) ಗಾಯಗೊಂಡ ಯುವಕನಾಗಿದ್ದು, ಅತ್ತಿಗೆರೆ ಗ್ರಾಮದ ಗ್ರಾಪಂ ಸದಸ್ಯ ಬಾಬಣ್ಣ, ಕಾರ್ತಿಕ್ ಹಾಗೂ ಹರೀಶ್ ಸೇರಿ ಅರವತ್ತಕ್ಕೂ ಹೆಚ್ಚು ಜನ ಸವರ್ಣೀಯರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಯುವತಿಗೆ ಸಂದೇಶ ಕಳುಹಿಸಿದ ಆರೋಪ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಯುವತಿಗೆ ಸಂದೇಶ ಕಳುಹಿಸಿದ ಆರೋಪ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

By

Published : May 16, 2022, 8:45 PM IST

Updated : May 16, 2022, 9:00 PM IST

ದಾವಣಗೆರೆ: ಯುವತಿಯೊಬ್ಬಳಿಗೆ ಸಂದೇಶ ಕಳುಹಿಸಿದ್ದ ಎಂಬ ಒಂದೇ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎರಡು ದಿನ ಚಿತ್ರ ಹಿಂಸೆ ನೀಡಿದ್ದಲ್ಲದೆ, ಅರೆ ಬೆತ್ತಲೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸವರ್ಣೀಯರ ಮೇಲೆ ದೂರು ದಾಖಲಾಗಿದೆ.

ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹಲ್ಲೆಗೊಳಗಾದ ಯುವಕನ ಸಂಬಂಧಿಕರು ಮಾಯಕೊಂಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾಗಿ ಗಾಯಗೊಂಡ ದಲಿತ ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಘಟನೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ಕಳೆದ ವಾರ ಹಿಂದೆಯಷ್ಟೇ ನಡೆದಿತ್ತು.‌

ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಗಣೇಶ (20) ಗಾಯಗೊಂಡ ಯುವಕನಾಗಿದ್ದು, ಅತ್ತಿಗೆರೆ ಗ್ರಾಮದ ಗ್ರಾಪಂ ಸದಸ್ಯ ಬಾಬಣ್ಣ, ಕಾರ್ತಿಕ್ ಹಾಗೂ ಹರೀಶ್ ಸೇರಿ ಅರವತ್ತಕ್ಕೂ ಹೆಚ್ಚು ಜನ ಸವರ್ಣೀಯರು ಈತನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಆತನ‌ ತಾಯಿಯನ್ನ ಎರಡು ಹಗಲು ಒಂದು ರಾತ್ರಿ ಕಲ್ಯಾಣ ಮಂಟಪದ ಕೋಣೆಯಲ್ಲಿ ಕುಡಿಟ್ಟು ಹಿಂಸೆ ಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಯುವತಿಯೇ ಮೊದಲು ಸಂದೇಶ ಕಳುಹಿಸಿದ್ದು: ಗಾಯಾಳು ಯುವಕನ ಮೊಬೈಲ್ ಪರಿಶೀಲನೆ ಮಾಡಲಾಗಿದ್ದು, ಯುವಕನಿಗೆ ಹುಡುಗಿಯೇ ಮೊದಲು ಹಾಯ್ ಅಂತಾ ಮೆಸೇಜ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಹುಡುಗಿಯೇ ಸಂದೇಶ ಕಳುಹಿಸಿದ್ದರೂ ಅದನ್ನು ಅರಿಯದ ಹುಡುಗಿ ಸಂಬಂಧಿಕರು ಯುವಕ ಗಣೇಶ್ ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ತಲಾಶ್​

Last Updated : May 16, 2022, 9:00 PM IST

For All Latest Updates

ABOUT THE AUTHOR

...view details