ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ಪಿಡಿಒ ಮೇಲೆ ಹಲ್ಲೆ: ಯುವಕ ಅರೆಸ್ಟ್​​​ - ಪಿಡಿಒ ಮೇಲೆ ಹಲ್ಲೆ

ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ದಾವಣಗೆರೆಯ ಕರೆಕಟ್ಟೆ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಕಿಡಿಗೇಡಿ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.

Assault on PDO:  accuse arrested
ಪಿಡಿಒ‌‌ ರಂಗಸ್ವಾಮಿ ಹಲ್ಲೆಗೊಳಗಾದವರು

By

Published : May 7, 2020, 6:48 PM IST

ದಾವಣಗೆರೆ: ಪಿಡಿಒ‌‌ ಮೇಲೆ ಕಿಡಿಗೇಡಿ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಸಮೀಪದ ಕರೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಸೃಜನ್ ಬಂಧಿತ ಆರೋಪಿ
ಕರೆಕಟ್ಟೆ ಗ್ರಾಮ ಪಂಚಾಯಿತಿ ಪಿಡಿಒ‌‌ ರಂಗಸ್ವಾಮಿ ಹಲ್ಲೆಗೊಳಗಾದವರು. ಗ್ರಾಮಸ್ಥರಲ್ಲಿ‌ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವೇಳೆ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಸೃಜನ್ ಎಂಬ ಯುವಕನಿಗೆ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ. ಆಗ ಸಿಟ್ಟಿಗೆದ್ದ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದ ರಂಗಸ್ವಾಮಿ ಅವರನ್ನು ದೂಡಿ ಹಲ್ಲೆ ನಡೆಸಿದ್ದಾನೆ. ರಕ್ಷಣೆಗಾಗಿ ಗ್ರಾಮ ಸೇವಕ ರುದ್ರೇಶ್ ಎಂಬುವವರು ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪಿಡಿಒ ರಂಗಸ್ವಾಮಿ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆರೋಪಿಯನ್ನು ಸಂತೆಬೆನ್ನೂರು ಪಿಎಸ್ಐ ಶಿವರುದ್ರಪ್ಪ ಬಂಧಿಸಿದ್ದಾರೆ.

ABOUT THE AUTHOR

...view details