ದಾವಣಗೆರೆ:ಲಾಕ್ಡೌನ್ ನಡುವೆ ಇಸ್ಪೀಟ್ ಆಡುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ಯುವಕನಿಗೆ, ಆರು ಜನರ ತಂಡ ಥಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನಡೆದಿದೆ. ಸುನಿಲ್ ಕುಮಾರ್ ಹಲ್ಲೆಗೊಳಗಾದ ಯುವಕನಾಗಿದ್ದು, ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಸ್ಪೀಟ್ ಆಡುವವರ ಮಾಹಿತಿ ನೀಡಿದ ಯುವಕನ ಮೇಲೆ ಹಲ್ಲೆ..! - ದಾವಣಗೆರೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮ
ಇಸ್ಪೀಟ್ ಆಡುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ಯುವಕನಿಗೆ, ಆರು ಜನರ ತಂಡ ಥಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನಡೆದಿದೆ.
ಯುವಕನ ಮೇಲೆ ಹಲ್ಲೆ
ನಿನ್ನೆ ಅಧಿಕಾರಿಗಳು ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸ್ ಠಾಣೆಯಿಂದ ವಾಪಸ್ ಬಂದ ಆರು ಜನರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸುನಿಲ್ ಹೇಳಿದ್ದಾನೆ.