ದಾವಣಗೆರೆ: ಹಳೆ ದ್ವೇಷದ ಹಿನ್ನೆಲೆ ತಂಡವೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ವಿನಾಯಕನಗರದ ಅಶೋಕ್ ಹಲ್ಲೆಗೊಳಗಾದ ಯುವಕ.
ದಾವಣಗೆರೆ: ಹಳೆ ದ್ವೇಷದ ಹಿನ್ನೆಲೆ ತಂಡವೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ವಿನಾಯಕನಗರದ ಅಶೋಕ್ ಹಲ್ಲೆಗೊಳಗಾದ ಯುವಕ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಶೋಕ್‌ನನ್ನು ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ, ಅಣ್ಣಪ್ಪ, ಮಂಜ, ಮಣಿ ಎಂಬ ನಾಲ್ವರು ಅಶೋಕ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ:
2018ರಲ್ಲಿ ಗೋಲಿ ಆಡುವಾಗ ಮಾತಿಗೆ ಮಾತು ಬೆಳೆದು ಭರತ್ ಎಂಬ ಯುವಕನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಅಶೋಕ್ ಹಾಗೂ ಆತನ ಸ್ನೇಹಿತರು ಭಾಗಿಯಾಗಿ, ಜೈಲು ಸೇರಿದ್ದರು. ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಅಶೋಕ್ ಜೈಲಿನಿಂದ ಹೊರ ಬಂದಿದ್ದ. ಅಶೋಕ್ ಜೈಲಿನಿಂದ ಬಂದ ಕೆಲ ದಿನಗಳಲ್ಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದು, ಹಳೆ ದ್ವೇಷವೇ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.