ಕರ್ನಾಟಕ

karnataka

ETV Bharat / state

ವಿಚಾರಣೆ ನೆಪದಲ್ಲಿ ಥರ್ಡ್ ಗ್ರೇಡ್ ಟ್ರೀಟ್ಮೆಂಟ್: ಎಎಸ್ಐ ವಿರುದ್ಧ ಆರೋಪ - ಮಹಿಳಾ ಎಎಸ್ ಐ ಸಮೀಮಾ ಬಾನು

ವಿಚಾರಣೆ ನೆಪದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಮಹಿಳೆಗೆ ರಕ್ತ ಹೆಪ್ಪುಗಟ್ಟುವಂತೆ ದಾವಣಗೆರೆಯ ಮಹಿಳಾ ಎಎಸ್‌ಐ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

asi-gave-third-grade-treatment-to-women-in-davanagere
ರೇಷ್ಮಾ ಹಲ್ಲೆಗೊಳಗಾದ ಮಹಿಳೆ

By

Published : Dec 22, 2019, 5:42 PM IST

ದಾವಣಗೆರೆ: ವಿಚಾರಣೆ ನೆಪದಲ್ಲಿ ಆರೋಪಿ ಮಹಿಳೆಗೆ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ನೀಡಿರುವ ಆರೋಪ ಮಹಿಳಾ ಎಎಸ್‌ಐ ವಿರುದ್ಧ ಕೇಳಿ ಬಂದಿದೆ. ಕಳ್ಳತನ ಮಾಡಿದ್ದ ಆರೋಪಿ ಮಹಿಳೆಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಜಾದ್ ನಗರ ಪೊಲೀಸ್ ಠಾಣೆಯ ಮಹಿಳಾ ಎಎಸ್ ಐ ಸಮೀಮಾ ಬಾನು ಅವರು, ಕಳ್ಳತನ ಆರೋಪದ ರೇಷ್ಮಾ ಎಂಬಾಕೆಯ ಮೇಲೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಿಚಾರಣೆ ನೆಪದಲ್ಲಿ ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ಕೊಟ್ಟಿದ್ದಾರಂತೆ ಎಎಸ್ಐ

ಕಳೆದ ಎಂಟು ವರ್ಷಗಳಿಂದ ದಾವಣಗೆರೆಯ ಅಹಮ್ಮದ್ ನಗರದ ಅಸದುಲ್ಲಾ ಸಾಬ್‌ ಎಂಬುವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಸದುಲ್ಲಾ ಅವರ ಮನೆಯಲ್ಲಿ ಶುಕ್ರವಾರ ಚಿನ್ನಾಭರಣ ಕಳವಾಗಿತ್ತು. ಅವರು ಈ ಬಗ್ಗೆ ಅಜಾದ್‌ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದ ಮಹಿಳಾ ಎಎಸ್ ಐ ಸಮೀಮ್ ಬಾನು, ರೇಷ್ಮಾಳಿಗೆ ಥರ್ಡ್‌ ಡಿಗ್ರಿ ಟ್ರೀಟ್ಮೆಂಟ್‌ ನೀಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಚಾರಣೆಗೆ ಕರೆಸಿ ಆರೋಪಿಗೆ ಆಯಕಟ್ಟಿನ ಭಾಗಗಳಿಗೆ ಹಿಗ್ಗಾಮುಗ್ಗ ಥಳಿಸಿ, ಬೆದರಿಕೆ ಹಾಕಿರುವುದು ಪೊಲೀಸರ ದೌರ್ಜನ್ಯವನ್ನು ಪ್ರತಿಬಿಂಬಿಸುವಂತಿದೆ. ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details