ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಮಗಳ ಮನೆಗೆ ಹೊರಟ್ಟಿದ್ದ ಎಎಸ್ಐ ಸಾವು.. ಶಿವಮೊಗ್ಗದಲ್ಲಿ ಶಾಲಾ ಶಿಕ್ಷಕನ ವಿರುದ್ಧ ಪೊಕ್ಸೋ ಪ್ರಕರಣ

ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್​ಐ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಅಪಘಾತದಲ್ಲಿ ಎಎಸ್ಐ ಸಾವು
ಅಪಘಾತದಲ್ಲಿ ಎಎಸ್ಐ ಸಾವು

By

Published : Feb 4, 2023, 9:00 PM IST

ದಾವಣಗೆರೆ: ಮಗಳನ್ನು ನೋಡಲು ಹೊರಟಿದ್ದ ಎಎಸ್​ಐ ರಸ್ತ ಅಪಘಾತದಲ್ಲಿ ದಾರುಣವಾಗಿ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರವಲಯದ ಚಿನ್ನು ಡಾಬಾ ಬಳಿ ನಡೆದಿದೆ. ಎರಡು ಬೈಕ್ ನಡುವೆ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಜಯನಗರ ಜಿಲ್ಲೆಯ ಹಂಪಿ ನಿವಾಸಿ ಶಬೀರ್ ಹುಸೇನ್ (59) ದಾರುಣವಾಗಿ ಮೃತಪಟ್ಟಿದ್ದಾರೆ

ಪ್ರಕರಣವೊಂದರ ವಿಚಾರಣೆ ಮುಗಿಸಿ ಬಳಿಕ ಮಗಳು ಮನೆಗೆ ಹೊರಟಿದ್ದ ವೇಳೆ ಅಪಘಾತವಾಗಿ ದಾರುಣ ಅಂತ್ಯ ಕಂಡಿದ್ದಾರೆ. ಇಂದು ಬೆಳಗ್ಗೆ ಚಿತ್ರದುರ್ಗದಲ್ಲಿನ ಮಗಳ ಮನೆಗೆ ಹೊರಟ್ಟಿದ್ದ ವೇಳೆ ಬೈಕ್ ಅಪಘಾತವಾಗಿದ್ದು, ಬೈಕ್ ಡಿಕ್ಕಿಯ ರಭಸಕ್ಕೆ ಶಬ್ಬೀರ್ ಹುಸೇನ್ ತಲೆಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಶಬ್ಬೀರ್ ಹುಸೇನ್ ಅವರನ್ನು ಕಳೆದುಕೊಂಡು ಇಡೀ ವಿಜಯನಗರ ಪೋಲಿಸರು ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಯೊಂದಿಗೆ ಅನುಚಿತ ವರ್ತನೆ: ಶಿಕ್ಷಕರಿಬ್ಬರ ವಿರುದ್ದ ಪೋಕ್ಸೋ ಕೇಸು ದಾಖಲು(ಶಿವಮೊಗ್ಗ):ಸರ್ಕಾರಿ ಶಾಲೆಯ ಶಿಕ್ಷಕರೂರ್ವರು ಬಾಲಕಿಯ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಅನ್ವಯ ಹೊಸನಗರ ತಾಲೂಕು ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕು ಹುಂಚದ ಸರ್ಕಾರಿ ಪ್ರಾಥ‌ಮಿಕ‌ ಶಾಲೆಯಯಲ್ಲಿ ಕಳೆದ ಒಂದು ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನೊಬ್ಬ ಅಸಭ್ಯವರ್ತನೆ ತೋರಿದ್ದಾಗಿ ನೊಂದ ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಘಟನೆಯ ವಿವರ ತಿಳಿದ ತಾಯಿ, ಇನ್ನೋರ್ವ ಶಿಕ್ಷಕಿಯ ಬಳಿ ಶಿಕ್ಷಕರಿಗೆ ಬುದ್ದಿವಾದ ಹೇಳಲು ತಿಳಿಸಿದ್ದಾರೆ.

ಆದರೇ, ವಿವರಣೆ ಪಡೆದ ಶಿಕ್ಷಕಿ ಘಟನೆಯ ಬಗ್ಗೆ ಯಾವುದೇ ಸಂಬಂಧ ಪಟ್ಟ ಶಿಕ್ಷಕರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಶಿಕ್ಷಕರು ಒಳ್ಳೆಯ ವ್ಯಕ್ತಿಯಾಗಿದ್ದು, ಅವರ ಬಗ್ಗೆ ಈ ರೀತಿ ಸುಳ್ಳು ಹೇಳಿದರೇ ಶಾಲೆಯಿಂದ ನಿಮ್ಮ ಮಗಳಿಗೆ ಟಿಸಿ ಕೊಡುವುದಾಗಿ ಬೆದರಿಕೆ ಹಾಕಿದ್ದರಂತೆ. ಇದರಿಂದ ಬಾಲಕಿ ತಾಯಿಗೆ ದಿಕ್ಕು ತೋಚದೇ ಗಂಡನಿಗೆ ವಿಚಾರ ತಿಳಿಸಿದ್ದರು. ಅಷ್ಟೆರಲ್ಲಾಲೇ ಮಕ್ಕಳ ರಕ್ಷಣಾ ಘಟಕದವರಿಗೆ ಈ ಬಗ್ಗೆ ಬೇರೋಬ್ಬರು ಮಾಹಿತಿ ನೀಡಿದ್ದರು.

ವಿಷಯ ತಿಳಿದ ಮಕ್ಕಳ ರಕ್ಷಣಾ ಘಟಕದವರು, ನೊಂದ ಬಾಲಕಿಯ ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ನಂತರ ಮಕ್ಕಳ‌ ರಕ್ಷಣಾ ಘಟಕದವರು ರಿಪ್ಪ‌ನಪೇಟೆ ಪೊಲೀಸ್ ಠಾಣೆ ಪಿಎಸ್ಐಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಬಾಲಕಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಇನ್ನೊಂದು ಕಡೆ ಪಿಎಸ್‌ಐ ಸುಷ್ಮಾ ನೇತೃತ್ವದ ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯವರು ಅಗಮಿಸಿ ವಿಚಾರಣೆ ನಡೆಸಿತು.

ನಂತರ ಬಾಲಕಿಯನ್ನು ಶಿವಮೊಗ್ಗ ಸುರಭಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬಾಲಕಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಕೆಜಿಎಫ್ ಬಾಬು ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ ಯುವರಾಜ್

ABOUT THE AUTHOR

...view details