ಕರ್ನಾಟಕ

karnataka

ETV Bharat / state

ದಾವಣಗೆರೆ: ದುರ್ಗಾ ದೇವಿ ವೇಷದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಆರ್ಟಿಸ್ಟ್​ ರೂಪಾ - ನವರಾತ್ರಿ ಹಬ್ಬ

ನವರಾತ್ರಿ ಹಬ್ಬದಂದು ಮನೆಯಲ್ಲಿ, ದೇವಾಲಯಗಳಲ್ಲಿ ನವದುರ್ಗೆಯರಿಗೆ ವಿಶೇಷ ಅಲಂಕಾರ ಮಾಡಿ ಸಂಭ್ರಮ ಸಡಗರದಿಂದ ಪೂಜಿಸಲಾಗುತ್ತದೆ. ಆದರೆ, ದಾವಣಗೆರೆಯಲ್ಲಿ ಮೇಕಪ್ ಆರ್ಟಿಸ್ಟ್ ಒಬ್ಬರು ತಾವೇ ದುರ್ಗಾ ದೇವಿಯ ರೀತಿ ವೇಷ ಹಾಕಿಕೊಂಡು, ಮೇಕಪ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದುರ್ಗಾ ದೇವಿಯ ವೇಷದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಆರ್ಟಿಸ್ಟ್​ ರೂಪಾ
ದುರ್ಗಾ ದೇವಿಯ ವೇಷದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಆರ್ಟಿಸ್ಟ್​ ರೂಪಾ

By

Published : Sep 30, 2022, 7:27 PM IST

ದಾವಣಗೆರೆ: ನವರಾತ್ರಿ ಹಬ್ಬದಲ್ಲಿ ಪ್ರಮುಖವಾಗಿ ನವದುರ್ಗೆಯರನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಲಾಗುತ್ತದೆ. ಆದರೆ ಇಲ್ಲಿ ಮೇಕಪ್ ಆರ್ಟಿಸ್ಟ್​ವೊಬ್ಬರು ದುರ್ಗಾ ದೇವಿಯ ರೀತಿ ವೇಷ ಹಾಕಿ, ಅವರೇ ಮೇಕಪ್​ ಮಾಡಿಕೊಂಡಿದ್ದಾರೆ. ದಾವಣಗೆರೆ ವಿನೋಭನಗರದ ಮೇಕಪ್ ಆರ್ಟಿಸ್ಟ್ ರೂಪಾ ಸುರೇಶ್ ರಿಯಲ್ ದುರ್ಗಾದೇವಿಯ ರೀತಿ ಕಾಣಿಸುತ್ತಿದ್ದಾರೆ.

ದುರ್ಗಾ ದೇವಿಯ ವೇಷದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಆರ್ಟಿಸ್ಟ್​ ರೂಪಾ

ಇದಲ್ಲದೇ ರೂಪಾ ಅವರು ಈ ಹಿಂದೆ ಬಾಲಕಿಗೆ ಲಕ್ಷ್ಮಿ ಅವತಾರದ ವೇಷ ಹಾಕುವ ಮೂಲಕ ಸುದ್ದಿಯಾಗಿದ್ದರು. ಇದೀಗ ನವರಾತ್ರಿ ನಿಮಿತ್ತ ದುರ್ಗಾ ದೇವಿಯ ವೇಷ ಹಾಕಿ, ಅದಕ್ಕೆ ಅವರೇ ವಿಶೇಷವಾದ ಟಚ್ ನೀಡಿದ್ದಾರೆ. ಇದಲ್ಲದೇ ರೂಪಾ ಅವರು ಕಾಳಿ ಅವತಾರ, ದುರ್ಗಿ, ಸರಸ್ವತಿ ರೀತಿ ಅಲಂಕಾರ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಶಾಲಾ - ಕಾಲೇಜು ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಮಹನೀಯರ ದಿನಾಚರಣೆ ವೇಳೆಯಲ್ಲಿ, ಅವರಿಗೆ ವಿವಿಧ ಅವತಾರದಲ್ಲಿ ಮೇಕಪ್ ಮಾಡಿ ರೆಡಿ ಮಾಡುತ್ತಾರೆ. ಕಳೆದ ವರ್ಷ ದಸರಾ ಹಬ್ಬದಲ್ಲಿ ಇವರು ಕಾಳಿ ಅವತಾರದ ಮೇಕಪ್ ಮಾಡಿಕೊಂಡಿದ್ದರು.

ಇದನ್ನೂ ಓದಿ:ನವರಾತ್ರಿ ಹಬ್ಬದ ನಿಮಿತ್ತ ಮಂಗಳಮುಖಿಯರಿಗೆ ಬಾಗಿನ

ABOUT THE AUTHOR

...view details