ಕರ್ನಾಟಕ

karnataka

ETV Bharat / state

22 ವರ್ಷದ ನಂತರ ಕೋಡಿ ಬಿದ್ದ ಕೆರೆ: ಅರಸೀಕೆರೆ ಗ್ರಾಮಸ್ಥರಿಂದ ಬಾಗಿನ ಅರ್ಪಣೆ, ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ - ಕೆರೆ ತುಂಬಿ ಕೋಡಿ

22 ವರ್ಷಗಳ ನಂತರ ಅರಸೀಕೆರೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಹಿಂದೂಗಳ ಸಂಪ್ರದಾಯದಂತೆ ಪೂಜೆ ಮಾಡಿ ಬಾಗಿನ ಅರ್ಪಿಸಿದರು. ಇದೇ ವೇಳೆ ಗ್ರಾಮದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

arsikere lake fullfilled after 22 years
ಅರಸೀಕೆರೆ ಗ್ರಾಮಸ್ಥರಿಂದ ಬಾಗಿನ ಅರ್ಪಣೆ

By

Published : Oct 9, 2022, 9:47 AM IST

ದಾವಣಗೆರೆ: ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಅರಸೀಕೆರೆ ಗ್ರಾಮದಲ್ಲಿರುವ ಕೆರೆ ತುಂಬಿದ್ದರಿಂದ ಸಾವಿರಾರು ಜನ ಸೇರಿ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸಿದರು.

22 ವರ್ಷಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಹಿಂದೂಗಳು ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ನಡೆಸಿ ಸಂಪ್ರದಾಯದಂತೆ ಗಂಗಾ ಪೂಜೆ ಮಾಡಿ ಬಾಗಿನ ಅರ್ಪಿಸಿದರು. ಬಳಿಕ ಯುವಕರು ಕೆರೆಯಲ್ಲಿ ಈಜಾಡಿ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಗ್ರಾಮದ ಮುಸ್ಲಿಂ ಬಾಂಧವರು ಸಹ ಕೆರೆ ಕೋಡಿ ಮೇಲೆ‌ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯುವಕ ಯುವತಿಯರು ಕೆರೆ ಕೋಡಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದರುಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಅರಸೀಕೆರೆ ಗ್ರಾಮಸ್ಥರಿಂದ ಬಾಗಿನ ಅರ್ಪಣೆ

ಇದನ್ನೂ ಓದಿ:45 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದ ಅಣಜಿ ಕೆರೆ.. ಕೋಡಿ ಬಿದ್ದ ಸ್ಥಳದಲ್ಲಿ ಜನವೋ ಜನ

ABOUT THE AUTHOR

...view details