ದಾವಣಗೆರೆ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ - ಅಕ್ರಮ ಗಾಂಜಾ ಮಾರಾಟ
ದಾವಣಗೆರೆಯ ಸಿಇಎನ್ ಅಪರಾಧ ಠಾಣೆ ಪೊಲೀಸರಿಂದ ದಾಳಿ ನಡೆಸಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶಿವಮೊಗ್ಗ ರಸ್ತೆಯ ಪಿಎಸ್ ಕೆ ಫಾರ್ಮ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ದಾವಣಗೆರೆಯ ಸಿಇಎನ್ ಅಪರಾಧ ಠಾಣೆ ಪೊಲೀಸರಿಂದ ದಾಳಿ ನಡೆಸಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶಿವಮೊಗ್ಗ ರಸ್ತೆಯ ಪಿಎಸ್ ಕೆ ಫಾರ್ಮ್ ಬಳಿ ಬಂಧಿಸಲಾಗಿದೆ. ಭದ್ರಾವತಿ ಮೂಲದ ಸಿ ಆರ್ ಅರವಿಂದನ್, ಅನಿಲ್ ಕುಮಾರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಸಿಇಎನ್ ಅಪರಾಧ ಠಾಣೆಯ ಸಿಪಿಐ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಂಧಿತರಿಂದ 2 ಲಕ್ಷದ 33 ಸಾವಿರ ಮೌಲ್ಯದ 5 ಕೆ ಜಿ 778 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.