ಕರ್ನಾಟಕ

karnataka

By ETV Bharat Karnataka Team

Published : Jan 18, 2024, 10:43 PM IST

ETV Bharat / state

ಸೇಫ್ ಲಾಕರ್​ನಲ್ಲಿ ಇರಿಸಿದ್ದ ಹಣ ಕದ್ದ ಕಚೇರಿಯ ಮಾಜಿ ನೌಕರ: ಬಂಧನ

ಸೇಫ್​ ಲಾಕರ್​ನಲ್ಲಿರಿಸಿದ್ದ ಹಣವನ್ನು ಕಚೇರಿಯ ಮಾಜಿ ನೌಕರನೇ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಹಣ ಕದ್ದ ಕಚೇರಿಯ ಮಾಜಿ ನೌಕರನ ಬಂಧನ
ಹಣ ಕದ್ದ ಕಚೇರಿಯ ಮಾಜಿ ನೌಕರನ ಬಂಧನ

ದಾವಣಗೆರೆ: ಸೇಫ್ ಲಾಕರ್​ನಲ್ಲಿ ಇರಿಸಿದ್ದ ಹಣ ಎಗರಿಸಿದ ಘಟನೆ ನಡೆದ 12 ಗಂಟೆಯೊಳಗೆ ಕೆಟಿಜೆ ನಗರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಚೇರಿಯಲ್ಲಿ ಕಳ್ಳತನ ನಡೆದಿತ್ತು. ಸೇಫ್​ ಲಾಕರ್​ನಲ್ಲಿರಿಸಿದ್ದ 10.88 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿದ್ದರು, ಇದೀಗ ಆ ಪ್ರಕರಣವನ್ನು ಪೊಲೀಸರು ಹಣ ಸಮೇತ ಭೇದಿಸಿದ್ದಾರೆ.

ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಚೇರಿಯಲ್ಲಿ ಕಳ್ಳತನ ಮಾಡಿದ್ದ ಅದೇ ಕಚೇರಿಯ ಮಾಜಿ ನೌಕರನಾದ ಯರವ್ವನಾಗತಿಹಳ್ಳಿಯ ನಿವಾಸಿ ಕಿರಣ ಕುಮಾರ ಕೆ.ಬಿ. ಯನ್ನು ಬಂಧಿಸಲಾಗಿದೆ. ಕಳುವಾಗಿದ್ದ 10.88 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ನೀಡಿದ ಗುಂಪು ಸಾಲದ ಹಣವನ್ನು ಜ.13ರಂದು 10.88 ಲಕ್ಷ ಹಣವನ್ನು ಸಂಗ್ರಹಿಸಲಾಗಿತ್ತು.

ಎರಡನೇ ಶನಿವಾರ ರಜೆ ಇರುವ ಕಾರಣ ಬ್ಯಾಂಕ್‌ಗೆ ಡಿಪಾಸಿಟ್ ಮಾಡಲು ಸಾಧ್ಯವಾಗದೇ ಕಚೇರಿಯ ಸೇಫ್​ ಲಾಕ‌ರ್​ನಲ್ಲಿ ಹಣ ಇರಿಸಲಾಗಿತ್ತು. ಸುರಕ್ಷಿತ ಲಾಕರ್​ನ ಒಂದು ಕೀ ಕ್ಯಾಷಿಯ‌ರ್ ಹಾಗೂ ಮತ್ತೊಂದು ಕೀ ಮ್ಯಾನೇಜ‌ರ್ ಬಳಿ ಇರಿಸಲಾಗಿತ್ತು. ಆದರೆ, ಕಚೇರಿಯ ಸಿಬ್ಬಂದಿ ಮಂಗಳವಾರ ಸೇಫ್​ಲಾಕರ್ ತೆಗೆದು ನೋಡಿದಾಗ ಅದರಲ್ಲಿದ್ದ ಹಣ ನಾಪತ್ತೆಯಾಗಿತ್ತು. ಇದನ್ನು ನೋಡಿ ಗಾಬರಿಗೊಂಡ ಸಿಬ್ಬಂದಿ ಅದೇ ಕಚೇರಿಯಲ್ಲಿ ಅಂದು ತಂಗಿದ್ದ ಅರುಣ್​ಕುಮಾರ್​ ಅವರನ್ನು ವಿಚಾರಿಸಿದರು ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ.

ದಿಕ್ಕು ತೋಚದ ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್​ನ ಮ್ಯಾನೇಜರ್ ಅವಿನಾಶ್ ಹಣ ಕಳುವಾಗಿರುವ ಬಗ್ಗೆ ಕೆ.ಟಿ.ಜೆ. ನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ತನಿಖೆಗೆ ಇಳಿದ ಕೆಟಿಜೆ ನಗರ ಠಾಣೆಯ ಪೊಲೀಸರು ಜ.15ರ ಮಧ್ಯ ರಾತ್ರಿ ಕಚೇರಿಯ ಮಾಜಿ ನೌಕರ ಕಿರಣ್‌ ಕುಮಾರ್ ಮುಖಕ್ಕೆ ಟವಲ್ ಕಟ್ಟಿಕೊಂಡು ಕಚೇರಿಗೆ ಪ್ರವೇಶಿಸಿ ಸೇಫ್​ ಲಾಕರ್‌ನಲ್ಲಿ ಇಟ್ಟಿದ್ದ 10.88 ಲಕ್ಷ ರೂಪಾಯಿ ಹಣವನ್ನು ಕಳವು ಮಾಡಿದ್ದರು. ಈ ದೃಶ್ಯಗಳು ಕಚೇರಿಯ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಕಿರಣ್​ಕುಮಾರ್ ಅವ​ನನ್ನು ಪೋಲಿಸರು ಬಂಧಿಸಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಂಧಿತನಿಂದ 10.88 ಲಕ್ಷ ಹಣವನ್ನೂ ವಸೂಲಿ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಬಿಲ್ಡರ್ ಅಪಹರಿಸಿ ಕಿರುಕುಳ; 8 ಜನರ ವಿರುದ್ಧ ಎಫ್ಐಆರ್

ABOUT THE AUTHOR

...view details