ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಅರ್ಜುನ್​​ ಹಲಕುರ್ಕಿ - ಚಿನ್ನದ ಪದಕ ಗೆದ್ದ ಅರ್ಜುನ್ ಹಲಕುರ್ಕಿ

ಅರ್ಜುನ್ ಹಲಕುರ್ಕಿ ದಾವಣಗೆರೆ ಕ್ರೀಡಾ ಹಾಸ್ಟೆಲ್​ನ ಕುಸ್ತಿಪಟುವಾಗಿದ್ದು, ಚಿನ್ನದ ಪದಕ ಗೆಲ್ಲುವ ಮೂಲಕ ಪ್ರೀ ಒಲಿಂಪಿಕ್ ಕ್ಯಾಂಪ್​ಗೆ ಆಯ್ಕೆಯಾಗಿದ್ದಾರೆ.

arjun halakurki win national wrestling
arjun halakurki win national wrestling

By

Published : Feb 20, 2021, 9:50 PM IST

ದಾವಣಗೆರೆ:ರಾಷ್ಟ್ರೀಯ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಬೆಣ್ಣೆನಗರಿ ದಾವಣಗೆರೆಯ ಅರ್ಜುನ್ ಹಲಕುರ್ಕಿ ಯಶಸ್ವಿಯಾಗಿದ್ದಾರೆ.

ಚಿನ್ನದ ಪದಕ ಗೆದ್ದ ಅರ್ಜುನ್ ಹಲಕುರ್ಕಿ

ಅರ್ಜುನ್ ಹಲಕುರ್ಕಿ ದಾವಣಗೆರೆ ಕ್ರೀಡಾ ಹಾಸ್ಟೆಲ್​ನ ಕುಸ್ತಿಪಟುವಾಗಿದ್ದು, ಚಿನ್ನದ ಪದಕ ಗೆಲ್ಲುವ ಮೂಲಕ ಪ್ರೀ ಒಲಿಂಪಿಕ್ ಕ್ಯಾಂಪ್​ಗೆ ಆಯ್ಕೆಯಾಗಿದ್ದಾರೆ. ಪಂಜಾಬ್​ನ ಜಲಂಧರ್​ನಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಜುನ್ ಎದುರಾಳಿ ಹರಿಯಾಣದ ವಿಜಯ್ ಎಂಬ ಪೈಲ್ವಾನ್​ನನ್ನು ಮಣಿಸಿದರು.

ಸೋಲು ಕಂಡಿರುವ ವಿಜಯ್ ವಿರುದ್ಧ ಅರ್ಜುನ್ 12-02ರ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್​ನಲ್ಲಿ ಪಾಲ್ಗೊಳ್ಳುವ ಭಾರತದ ಕುಸ್ತಿಪಟುಗಳ ಇಂಡಿಯನ್ ಕ್ಯಾಂಪ್​ಗೆ​ ಆಯ್ಕೆಯಾಗಿ ಮತ್ತೊಂದು ಇತಿಹಾಸ ಬರೆದರು.‌ ಅರ್ಜುನ್ ಗೆಲುವು ಸಾಧಿಸಿ ಕುಸ್ತಿಪಟುಗಳ ಇಂಡಿಯನ್ ಕ್ಯಾಂಪ್​ಗೆ ಆಯ್ಕೆಯಾಗಿದ್ದರಿಂದ ಕ್ರೀಡಾ ಹಾಸ್ಟೆಲ್​ನ ಸಿಬ್ಬಂದಿ ಹಾಗೂ ಸ್ನೇಹಿತರ ಸಂತಸ ಮುಗಿಲು ಮುಟ್ಟಿತ್ತು.

ABOUT THE AUTHOR

...view details