ದಾವಣಗೆರೆ:ಜಿಲ್ಲೆಯ ಹರಿಹರದ ಎಪಿಎಂಸಿಯಲ್ಲಿ ಆರಂಭಿಸಲಾಗಿರುವ ಗಂಜಿ ಕೇಂದ್ರದಲ್ಲಿ ಹೈಡ್ರಾಮಾ ನಡೆಯಿತು.
ತುಂಗಾಭದ್ರಾ ನದಿ ಉಕ್ಕಿ ಹರಿದ ಪರಿಣಾಮ ನದಿ ಪಾತ್ರದಲ್ಲಿ ವಾಸವಿದ್ದ ಹರಿಹರ ನಗರದ ಗಂಗಾನಗರದ 20ಕ್ಕೂ ಹೆಚ್ಚು ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ ಕೇಂದ್ರಕ್ಕೆ ಬರುವ ಮುನ್ನ ಗಲಾಟೆ ನಡೆಯಿತು.
ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಗಲಾಟೆ ನಿರಾಶ್ರಿತರಿಗಿಂತ ಹೊರಗಿನವರೇ ಹೆಚ್ಚು ಇದ್ದಾರೆ. ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕು. ಆದರೆ ಹೊರಗಿನವರು ಬಂದು ನಿವೇಶನಕ್ಕೆ ಹೆಸರು ಬರೆಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಬ್ಬರ ನಡುವೆ ಗಲಾಟೆ ನಡೆಯಿತು.
ಇಬ್ಬರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಹೊಡೆದಾಡಿಕೊಂಡರಲ್ಲದೇ, ಅವಾಚ್ಯ ಶಬ್ದಗಳಿಂದ ಪರಸ್ಪರರು ನಿಂದಿಸಿಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಜಗಳ ಬಿಡಿಸುವ ಗೋಜಿಗೆ ಹೋಗಲಿಲ್ಲ. ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ ಆಗಮಿಸುತ್ತಿದ್ದಾರೆ ಎಂದರಿತ ತಕ್ಷಣ ಅಧಿಕಾರಿಗಳು ಜಗಳ ಬಿಡಿಸಿದರು.