ಕರ್ನಾಟಕ

karnataka

ETV Bharat / state

ದಾವಣಗೆರೆ: ಅಡಿಕೆ ಗಿಡಗಳನ್ನು ಕಡಿದು ಕಿಡಿಗೇಡಿಗಳ ವಿಕೃತಿ - Davangere Arecanut trees

ದಾವಣಗೆರೆಯ ಗುಮ್ಮನೂರಲ್ಲಿ ಪ್ರಕಾಶ್​​ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಳೆದ ರಾತ್ರಿ ಕಡಿದು ಹಾಕಿದ್ದಾರೆ.

Davangere Arecanut trees Cut
ಅಡಿಕೆ ಗಿಡಗಳನ್ನ ಕಡಿದು ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

By

Published : Jan 7, 2022, 3:09 PM IST

ದಾವಣಗೆರೆ:ಬಾನೆತ್ತರಕ್ಕೆ ಬೆಳೆದು ನಿಂತಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಲ್ಲಿ ನಡೆದಿದೆ.

ಪ್ರಕಾಶ್ ಎಂಬುವವರಿಗೆ ಸೇರಿದ ತೋಟದಲ್ಲಿ ಸುಮಾರು 25ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ಹಾಕಲಾಗಿದೆ.


ಹಳೆಯ ದ್ವೇಷಕ್ಕೆ ದುಷ್ಕರ್ಮಿಗಳು ಕೃತ್ಯ ಎಸಗಿರಬಹುದು ಎನ್ನಲಾಗ್ತಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್:​ ದಾವಣಗೆರೆ, ಶಿವಮೊಗ್ಗದ ಜಿಲ್ಲಾಡಳಿತಗಳಿಂದ ಸಕಲ ಸಿದ್ಧತೆ

ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ತೋಟದ ಮಾಲೀಕ ಪ್ರಕಾಶ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

For All Latest Updates

ABOUT THE AUTHOR

...view details