ಕರ್ನಾಟಕ

karnataka

ETV Bharat / state

ದಾವಣಗೆರೆ ಎಪಿಎಂಸಿ ಏಜೆಂಟ್ ಮನೆಯಲ್ಲಿ ಶವವಾಗಿ ಪತ್ತೆ, ಕೊಲೆ ಶಂಕೆ - ಕೊಲೆ ಶಂಕೆ ,

ದಾವಣಗೆರೆಯ ಎಂಸಿಸಿಬಿ ಬ್ಲಾಕ್​ನಲ್ಲಿ ವಾಸವಿದ್ದ, ಎಪಿಎಂಸಿ ಏಜೆಂಟ್​ವೋರ್ವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

APMC agent dead body found

By

Published : Oct 10, 2019, 9:54 AM IST

Updated : Oct 10, 2019, 12:22 PM IST

ದಾವಣಗೆರೆ:ಎಪಿಎಂಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವೃದ್ಧರೊಬ್ಬರ ಮೃತದೇಹ ನಗರದ ಎಂಸಿಸಿಬಿ ಬ್ಲಾಕ್​ನಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಎಂಸಿಸಿಬಿ ಬ್ಲಾಕ್​ನಲ್ಲಿ ವಾಸವಿದ್ದ ಬಾಲಚಂದ್ರಪ್ಪ ಕೊಲೆಯಾಗಿರುವ ವ್ಯಕ್ತಿ. ಎಪಿಎಂಸಿಯಲ್ಲಿ ದಲ್ಲಾಳಿಯಾಗಿದ್ದ ಬಾಲಚಂದ್ರಪ್ಪ ಅವರನ್ನು ಹಣಕಾಸಿನ ವಿಚಾರವಾಗಿ ಇಲ್ಲವೇ ದ್ವೇಷದಿಂದ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಹನುಮಂತರಾಯ ಅವರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Oct 10, 2019, 12:22 PM IST

ABOUT THE AUTHOR

...view details