ದಾವಣಗೆರೆ:ಅಡಿಕೆನಾಡು ಎಂದೇ ಖ್ಯಾತಿ ಗಳಿಸಿರುವ ಚನ್ನಗಿರಿ ತಾಲೂಕಿನಲ್ಲಿ ಬೆಳೆಗಾರರ ಹಿತ ಕಾಪಾಡಲು ಪ್ರಾತಿನಿಧಿಕ ಸಂಸ್ಥೆ ತುಮಕೋಸ್ ತಲೆ ಎತ್ತಿ ನಿಂತಿದೆ. ಆದರೆ ಸಹಕಾರ ಸಂಘದ ಹೊಸ ಕಾನೂನು ಜಾರಿಯಿಂದ ಶೇ. 50%ರಷ್ಟು ಷೇರುದಾರ ಸದಸ್ಯರು ವೋಟಿಂಗ್ ಪವರ್ ಕಳೆದುಕೊಳ್ಳುವ ಆತಂಕದಲ್ಲಿದ್ದು, ಈ ಹಿನ್ನೆಲೆ ತುಮಕೋಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಡಿಕೆ ನಾಡು ಎಂದೇ ಪ್ರಸಿದ್ದಿ, ಇಲ್ಲಿ ಸರಿಸುಮಾರು ಮುಕ್ಕಾಲು ಭಾಗ ಅಡಿಕೆ ಬೆಳೆಗೆ ರೈತರು ಅವಲಂಬಿತರಾಗಿದ್ದು, ಈ ಹಿನ್ನೆಲೆ ಅಡಿಕೆ ಬೆಳೆಗಾರರ ಹಿತ ಕಾಯಲು ತುಮಕೋಸ್ ಸಹಕಾರಿ ಸಂಘ ಅಸ್ವಿತ್ವಕ್ಕೆ ತರಲಾಗಿತ್ತು. ಸಂಘದಿಂದ ಬೆಳೆಗಾರರಿಗೆ ಅನೂಕೂಲವು ಆಗಿದೆ. ಕಾಲಕಳೆದಂತೆ ತುಮಕೋಸ್ ಉತ್ತಮ ಹೆಸರು ಪಡೆಯಿತು. ಈ ಹಿನ್ನೆಲೆ ಸಂಘದ ಆಡಳಿತ ಮಂಡಳಿ ಆಯ್ಕೆಗೆ ಪೈಪೋಟಿಯು ಶುರುವಾಗ ತೊಡಗಿತು. ಈ ಬಾರಿಯೂ ಕೂಡ ಜಿದ್ದಾಜಿದ್ದಿನ ಕಣ ಏರ್ಪಟ್ಟಿದ್ದರೆ ಇತ್ತ ಮತದಾರ ಮಾತ್ರ ಗೊಂದಲದಲ್ಲಿ ಇದ್ದಾನೆ.