ಕರ್ನಾಟಕ

karnataka

ETV Bharat / state

ನೀರುಗಂಟಿ ಹುದ್ದೆಗೆ ಲಕ್ಷ ಲಕ್ಷ ರೂ. ಬೇಡಿಕೆ ಇಟ್ಟ ಆರೋಪ: ಆಡಿಯೋ ವೈರಲ್ - ನೀರುಗಂಟಿ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಹಾಗೂ ಗ್ರಾಮ ಪಂಚಾಯತಿ ಸದಸ್ಯನೋರ್ವ ನೀರುಗಂಟಿ ಹುದ್ದೆಗೆ ಲಕ್ಷ ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವ ಆಡಿಯೋವೊಂದು ವೈರಲ್ ಆಗಿದೆ.

audio viral
ಜಗಳೂರು ತಾಲ್ಲೂಕಿನ ದಿದ್ದಿಗಿ ಗ್ರಾಮ ಪಂಚಾಯತಿ

By

Published : Jun 26, 2021, 6:56 PM IST

ದಾವಣಗೆರೆ: ಪಿಡಿಒಯೊಬ್ಬರು ನೀರುಗಂಟಿ ಹುದ್ದೆಗೆ ಲಂಚದ ಬೇಡಿಕೆ ಇಟ್ಟಿರುವ ಆಡಿಯೋವೊಂದು ವೈರಲ್ ಆಗಿದೆ.

ವೈರಲ್ ಆದ ಆಡಿಯೋ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ಉಚ್ವಂಗಿಪುರದ ಸದಸ್ಯರ ಜತೆ ಕಾನ್ಫರೆನ್ಸ್ ಕರೆಯಲ್ಲಿ ನೀರುಗಂಟಿ ಹುದ್ದೆಗೆ ಅಂಜಿನಪ್ಪ ಎಂಬುವರಿಗೆ 1 ಲಕ್ಷದ 60 ಸಾವಿರ ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಲಕ್ಷಾಂತರ ರೂ. ಹಣ ನೀಡಿದರೆ ಮಾತ್ರ ಅದೇಶ ಪತ್ರ ಕೊಡಿಸುವುದಾಗಿ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಇನ್ನೊಬ್ಬರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ನೀರುಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಬರುವುದಕ್ಕೆ ರೆಡಿ ಇದ್ದಾರೆ, ಹಣ ಕೊಟ್ಟರೆ ಮಾತ್ರ ಹುದ್ದೆ ನೀಡುತ್ತೇವೆ ಎಂದು ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಾತನಾಡಿಕೊಂಡಿರುವ ಆಡಿಯೋ ವೈರಲ್​ ಆಗಿದೆ.

ಇನ್ನು ಇದಕ್ಕೆ ಅಂಜಿನಪ್ಪ, ನಾನು ಎರಡು ವರ್ಷಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಈಗ ಲಕ್ಷಾಂತರ ರೂಪಾಯಿ ಹೇಗೆ ಜೋಡಿಸಲಿ. ಮನೆಯಲ್ಲಿ ಹೆಂಡತಿ, ಮಕ್ಕಳು ಉಪವಾಸ ಇರ್ತಾರೆ, ಹಣ ಜೋಡಿಸಲು ಸಾಧ್ಯವಿಲ್ಲ ಎಂದು ಹಣ ಹೊಂದಿಸಲು ನಿರಾಕರಿಸಿದ್ದಾರೆ.

ABOUT THE AUTHOR

...view details