ದಾವಣಗೆರೆ: ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಹಳ್ಳಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಷ ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗ ಬಿಟ್ಟು ಹಳ್ಳಿಯನ್ನು ದಿಲ್ಲಿ ಮಾಡುವ ಕನಸು ಹೊತ್ತು, ಗ್ರಾಪಂ ಚುನಾವಣೆಯಲ್ಲಿ ಗೆದ್ದು ಈಗ ಅಧ್ಯಕ್ಷೆ ಗಾದಿ ಏರಿದ್ದಾರೆ.
ಜಗಳೂರು ತಾಲೂಕಿನ ಸೊಕ್ಕೆ ಗ್ರಾಪಂಗೆ ಸ್ವಾತಿಯವರು ಅಧ್ಯಕ್ಷೆಯಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿ 5 ವರ್ಷಗಳ ಕಾಲ ಅಮೆರಿಕದಲ್ಲಿ ಸೇವೆ ಸಲ್ಲಿಸಿದ್ದ ಟೆಕ್ಕಿ ಸ್ವಾತಿ, ತಂದೆಯ ಆಸೆಯಂತೆ ಗ್ರಾಪಂ ಸದಸ್ಯೆಯಾಗಿ ಬಳಿಕ ಅಧ್ಯಕ್ಷೆಯ ಪಟ್ಟ ಅಲಂಕರಿಸಿದ್ದಾರೆ.
ಸೊಕ್ಕೆ ಗ್ರಾಪಂ ಅಧ್ಯಕ್ಷರಾಗಿದ್ದ ಅಜ್ಜ:ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಾ ಕೈತುಂಬ ಸಂಬಳ ಪಡೆಯುತ್ತಿದ್ದ ಸ್ವಾತಿ ಮೂಲತಃ ಇದೇ ಸೊಕ್ಕೆ ಗ್ರಾಮದವರು. ತಂದೆಯವರ ಮಾತಿನಂತೆ ತಾಯ್ನಾಡಿಗೆ ಆಗಮಿಸಿ ತಮ್ಮ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಇದಲ್ಲದೆ ಸ್ವಾತಿಯವರ ಅಜ್ಜ, ಚಿಕ್ಕಪ್ಪ ಕೂಡ ಇದೇ ಸೊಕ್ಕೆ ಪಂಚಾಯತ್ನಿಂದ ಆರಿಸಿ ಬಂದು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರಂತೆ.