ಕರ್ನಾಟಕ

karnataka

ETV Bharat / state

ದಾವಣಗೆರೆ: 'ಅರ್ಜಿ ಸಲ್ಲಿಸಿದರೆ ಸಿಗದು, ಹಣ ಕೊಟ್ಟವರ ಕೈಗೆ ಬೇಗ ಸೈಟು' - Irregularity in allotment of site in davanagere

ಸರ್ಕಾರದಿಂದ ಬಡವರಿಗಾಗಿ ಮಂಜೂರಾಗುವ ನಿವೇಶನಗಳು ಸರಿಯಾದ ಫಲಾನುಭವಿಗಳಿಗೆ ಕೈ ಸೇರುತ್ತಿಲ್ಲ ಎಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ಆರೋಪ ಮಾಡಿದ್ದಾರೆ.

allotment-of-plots-in-davangere-municipal-corporation
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರು ಸಿಗದ ಸೂರು, ಹಣ ನೀಡಿದವರಿಗೆ ಸುಲಭವಾಗಿ ಸಿಗುತ್ತೆ ನಿವೇಶನ

By

Published : Feb 22, 2023, 6:09 PM IST

Updated : Feb 22, 2023, 6:39 PM IST

ದಾವಣಗೆರೆ: 'ಅರ್ಜಿ ಸಲ್ಲಿಸಿದರೆ ಸಿಗದು, ಹಣ ಕೊಟ್ಟವರ ಕೈಗೆ ಬೇಗ ಸೈಟು'

ದಾವಣಗೆರೆ: ನಿರಾಶ್ರಿತರಿಗಾಗಿ ಸರ್ಕಾರ ಸಾಕಷ್ಟು ವಸತಿ ಹಾಗೂ ನಿವೇಶನದ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಆ ನಿವೇಶನಗಳನ್ನು ಬಡವರಿಗೆ ಉಚಿತವಾಗಿ ನೀಡಬೇಕೆಂದು ಸರ್ಕಾರದ ನಿಯಮ ಕೂಡ ಇದೆ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಡವರು, ನಿರಾಶ್ರಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಕೂಡ ನಿವೇಶನಗಳು ಮಾತ್ರ ಮರೀಚಿಕೆಯಾಗಿವೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಿವೇಶನಗಳ ಹಂಚಿಕೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿವೆ. ಸರ್ಕಾರದಿಂದ ಬಡವರಿಗಾಗಿಯೇ ಮಂಜೂರು ಆಗುವ ನಿವೇಶನಗಳು ಸರಿಯಾದ ಫಲಾನುಭವಿಗಳಿಗೆ ಕೈ ಸೇರುತ್ತಿಲ್ಲ ಎಂಬ ಆರೋಪಗಳನ್ನು ಸ್ವತಃ ಪಾಲಿಕೆ ಸದಸ್ಯರು ಮಾಡಿದ್ದಾರೆ. ಮಂಗಳವಾರ ನಡೆದ ಬಜೆಟ್ ಮಂಡನೆಯಲ್ಲಿ ಈ ವಿಚಾರವನ್ನು ಪಾಲಿಕೆಯ ಕೈ ಮತ್ತು ಕಮಲದ ಸದಸ್ಯರ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ವಿಚಾರವನ್ನು ಪ್ರಾಸ್ತಾಪಿಸುವ ಮೂಲಕ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.

ಇಲ್ಲಿಯವರೆಗೂ ದಾವಣಗೆರೆ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರಗಳಲ್ಲಿ 1600ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ತಮಗೆ ಬೇಕಾದವರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪವಿದೆ. ಬಜೆಟ್ ಸಭೆಯಲ್ಲಿ ಪಾಲಿಕೆಯ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಶ್ರಯ ಕಮಿಟಿಯ ಮ್ಯಾನೇಜರ್ ಗೋವಿಂದ ನಾಯಕ್​, ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎ ರವಿಂದ್ರನಾಥ್ ರವರು ಹೇಳಿದಂತೆ 12 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:75 ವರ್ಷದವರಿಗೂ ಟಿಕೆಟ್ ಕೊಡುವ ಸೂಚನೆ ನೀಡಿದ್ದಾರೆ: ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ರವೀಂದ್ರನಾಥ

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಸುಮಾರು 27 ಸಾವಿರ ಜನ ಮನೆ ನಿರಾಶ್ರಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಿವೇಶನಗಳು ಬಡವರಿಗೆ ಸಿಗುವ ಬದಲು ಉಳ್ಳವರ ಪಾಲಾಗಿವೆ. ಸಂಬಂಧಪಟ್ಟವರ ಗಮನಕ್ಕೆ ತರಲು ನಿರ್ಧಾರ ಮಾಡಿದ್ದು, ಇದು ತನಿಖೆಯಾಗಬೇಕು, ನಿಜವಾದ ನಿರಾಶ್ರಿತರಿಗೆ ಸೂರು ಸಿಗಬೇಕು. ಶಾಸಕರು ಹೇಳಿದರು ಎಂದು ನಿವೇಶನ ಹಂಚಿಕೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಕಾಂಗ್ರೆಸ್​ ಸದಸ್ಯ ನಾಗರಾಜ್ ಮಾತನಾಡಿ​, ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ಆಗಿದ್ದು, ಇದರ ಬಗ್ಗೆ ಕಮಿಷನರ್ ಅವರಿಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದೇವೆ, ಈಗಾಗಲೇ ತಮ್ಮ ವಾರ್ಡಿನಲ್ಲಿ 1 ರಿಂದ 2 ಲಕ್ಷ ರೂ. ಪಡೆದು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನನ್ನ ಗಮನಕ್ಕೆ ಬಾರದೆ 15 ಹಕ್ಕು ಪತ್ರಗಳನ್ನು ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ, ಸೈಟ್​ ಹಂಚಿಕೆ ವಿಚಾರವಾಗಿ ಯಾರು ಎಲ್ಲೂ ಬಾಯಿ ಬಿಡದಂತೆ ಹಣ ನೀಡಿ ನಿವೇಶನ ಪಡೆದವರಿಗೆ ಅಧಿಕಾರಿಗಳು ದಮ್ಕಿ ಹಾಕಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಶಿಥಿಲಗೊಂಡಿದ್ದ ದೇವಸ್ಥಾನದ ಜೀರ್ಣೋದ್ಧಾರ: 6 ಕೋಟಿ ರೂ. ದೇಣಿಗೆ ಹಾಕಿ ಹೊಯ್ಸಳ ಶೈಲಿ ಗುಡಿ ನಿರ್ಮಿಸಿದ ಗ್ರಾಮಸ್ಥರು

Last Updated : Feb 22, 2023, 6:39 PM IST

ABOUT THE AUTHOR

...view details