ಕರ್ನಾಟಕ

karnataka

ETV Bharat / state

ಸೋಂಕಿತರಿಗೆ ಧೈರ್ಯ ತುಂಬಲು ಕೋವಿಡ್ ಕೇರ್​​​​ ಸೆಂಟರ್​ನಲ್ಲೇ ರೇಣುಕಾಚಾರ್ಯ ವಾಸ್ತವ್ಯ - ಯಾರೇ ನೀನು ರೋಜಾ ಹೂವೆ,

ದಾವಣಗೆರೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದು, ‘ಯಾರೇ ನೀನು ರೋಜಾ ಹೂವೆ’ ಹಾಡಿಗೆ ಸಖತ್​ ಸ್ಟೆಪ್ಸ್​​​ ಹಾಕಿದ್ದಾರೆ.

Again MLA Renukacharya dance, Again MLA Renukacharya dance in Covid care center, Again MLA Renukacharya dance in Covid care center at Davanagere, MLA Renukacharya dance, MLA Renukacharya dance news, Yaare Neenu Roja Hoove, Yaare Neenu Roja Hoove song, ಕೋವಿಡ್​ ಸೆಂಟರ್​ನಲ್ಲಿ ಸಖತ್​ ಸ್ಟೆಪ್​​ ಹಾಕಿದ ರೇಣುಕಾಚಾರ್ಯ, ದಾವಣಗೆರೆಯಲ್ಲಿ ಕೋವಿಡ್​ ಸೆಂಟರ್​ನಲ್ಲಿ ಸಖತ್​ ಸ್ಟೆಪ್​​ ಹಾಕಿದ ರೇಣುಕಾಚಾರ್ಯ, ಶಾಸಕ ರೇಣುಕಾಚಾರ್ಯ, ಶಾಸಕ ರೇಣುಕಾಚಾರ್ಯ ಸುದ್ದಿ, ಯಾರೇ ನೀನು ರೋಜಾ ಹೂವೆ, ಯಾರೇ ನೀನು ರೋಜಾ ಹೂವೆ ಸುದ್ದಿ,
ರೇಣುಕಾಚಾರ್ಯ ಸಖತ್​ ಸ್ಟೆಪ್​​

By

Published : Jun 4, 2021, 8:05 AM IST

Updated : Jun 4, 2021, 8:55 PM IST

ದಾವಣಗೆರೆ: ಕೋವಿಡ್ ಕೇರ್ ಸೆಂಟರ್​​ನಲ್ಲಿ ರೇಣುಕಾಚಾರ್ಯ ನಿನ್ನೆಯಿಂದ ಮೂರು‌ ದಿನಗಳ ಕಾಲ ವಾಸ್ತವ್ಯ ಹೂಡಿದ್ದು, ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್​​ ಹಾಕಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಬಳಿ ಇರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದು, ‘ಯಾರೇ ನೀನು ರೋಜಾ ಹೂವೆ’ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ರಂಜಿಸಿದರು.

ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು‌ ಹಮ್ಮಿಕೊಂಡಿರುವ ರಸಮಂಜರಿ ಕಾರ್ಯಕ್ರಮಕ್ಕೆ ಬೆಂಗಳೂರಿನ ಕಲಾ ತಂಡವನ್ನು ಕರೆಸಲಾಗಿತ್ತು. ಕೋವಿಡ್​ ಕೇರ್​ ಸೆಂಟರ್​ನಲ್ಲಿ ಸೋಂಕಿತರನ್ನು ರಂಜಿಸಲು ಶಾಸಕ ರೇಣುಕಾಚಾರ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು. ಸೋಂಕಿತರು ತಮ್ಮ ನೋವುಗಳನ್ನು ಮರೆತು ಶಾಸಕರ ಜೊತೆ ಹೆಜ್ಜೆ ಹಾಕಿ ಸಂತಸಪಟ್ಟರು.

ಗುರುವಾರದಿಂದ ಮೂರು ದಿನ ಕೋವಿಡ್ ಕೇರ್ ಸೆಂಟರ್​ನಲ್ಲೇ ವಾಸ್ತವ್ಯ ಹೂಡಿರುವ ಶಾಸಕರು, ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಲಿದ್ದಾರೆ.

ರೇಣುಕಾಚಾರ್ಯ ಸಖತ್​ ಸ್ಟೆಪ್​​

ಈ ಹಿಂದೆ ಶಾಸಕ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ತಾಲೂಕುಗಳ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಅಲ್ಲದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಬಾಲಕನ ಜೊತೆ ಪೊಗರು ಚಿತ್ರದ ‘ಖರಾಬು ಬಾಸು ಖರಾಬು’ ಸಾಂಗ್​ಗೆ ಸಖತ್ ಹೆಜ್ಜೆ ಹಾಕಿದ್ದರು. ಶಾಸಕರು ಡ್ಯಾನ್ಸ್ ಮಾಡುವುದರ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದು, ಕೊನೆಗೆ ಪತ್ನಿಯ ಜೊತೆ ‘ಕುಲದಲ್ಲಿ ಕೀಳ್ಯಾವುದೋ’ ಎನ್ನುವ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ಹುರಿದುಂಬಿಸುವ ಕೆಲಸ ಮಾಡಿದರು.

Last Updated : Jun 4, 2021, 8:55 PM IST

ABOUT THE AUTHOR

...view details