ಕರ್ನಾಟಕ

karnataka

ETV Bharat / state

ಪ್ರತ್ಯೇಕ ಧರ್ಮದ ಕುರಿತು ಸಚಿವದ್ವಯರ ಹೇಳಿಕೆಗೆ ಶಾಮನೂರು ಪ್ರತಿಕ್ರಿಯೆ ಏನು? - undefined

ನಾನು ವೀರಶೈವ ಮಹಾಸಭಾಕ್ಕೆ ಅಧ್ಯಕ್ಷ, ಎಲ್ಲ ನಾನು ಹೇಳಿದಂತೆ ನಡೆಯುತ್ತೆ. ಚುನಾವಣೆ ಮುಗಿದ ಬಳಿಕ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ

By

Published : Apr 16, 2019, 5:08 PM IST

Updated : Apr 16, 2019, 8:04 PM IST

ದಾವಣಗೆರೆ: ಪ್ರತ್ಯೇಕ ಧರ್ಮ ವಿಚಾರವಾಗಿ ಎಂ ಬಿ ಪಾಟೀಲ್ ಹಾಗೂ ಡಿಕೆಶಿ ಅವರ ಆರೋಪ ಪ್ರತ್ಯಾರೋಪ ಹಿನ್ನಲೆ ಪ್ರತಿಕ್ರಿಯಿಸಿರುವ ಡಾ. ಶಾಮನೂರು ಶಿವಶಂಕರಪ್ಪ ನಾನು ವೀರಶೈವ ಮಹಾಸಭಾಕ್ಕೆ ಅಧ್ಯಕ್ಷ, ನಾನು ಹೇಳಿದಂತೆ ನಡೆಯೋದು ಎಂದು ಖಡಕ್ಕಾಗಿ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ

ಜಿಲ್ಲೆಯ ತುರ್ಚಘಟ್ಟ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ವೀರಶೈವ-ಲಿಂಗಾಯಿತ ಒಂದೇ ನಾಣ್ಯದ ಎರಡು ಮುಖಗಳು, ಎರಡು ಒಂದೇ ಎಂದರು.

ವೋಟು ಒಡೆಯಲು ಕಾಂಗ್ರೆಸ್ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕೈಗೆತ್ತಿಗೊಂಡಿತ್ತು ಎಂಬ ಬಿಎಸ್​ವೈ ಆರೋಪಕ್ಕೂ ಪ್ರತಿಕ್ರಿಯಿಸಿದ ಶಾಮನೂರು ಅವರು, ಬಿಎಸ್​ವೈ ಕೂಡ ಸ್ವತಂತ್ರರು, ಯಾವ ಪಕ್ಷದ ಪರವಾಗಿ, ವಿರೋಧವಾಗಿ ಹೇಳಿಕೆ ನೀಡಬಹುದು. ಚುನಾವಣೆ ಮುಗಿದ ಬಳಿಕ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದರು.

Last Updated : Apr 16, 2019, 8:04 PM IST

For All Latest Updates

TAGGED:

ABOUT THE AUTHOR

...view details