ಕರ್ನಾಟಕ

karnataka

ETV Bharat / state

ಬೆಣ್ಣೆ ನಗರಿಗೆ ಉಪ್ಪಿ: ಪ್ರಜಾಕೀಯ ಬೆಂಬಲಿತ ಅಭ್ಯರ್ಥಿಯ ಭೇಟಿ - ಉಪೇಂಧ್ರ

ನಿಮ್ಮ‌ ಜವಾಬ್ದಾರಿ ಮತ ಹಾಕೋದು ಒಂದೇ ಅಲ್ಲ, ಅದರ ಬದಲಾಗಿ ಅವರನ್ನು ನೀವು ಕೇಳ್ಬೇಕು, ಏನ್ ಮಾಡ್ತಾ ಇದ್ದೀರಾ, ಪ್ರತಿಯೊಂದು ಲೆಕ್ಕ ಕೊಡಿ ಎಂದು ಕೇಳ್ಬೇಕು. ನಮಗೆ ಕೆಲಸಗಾರರು ಬೇಕಾಗಿದ್ದಾರೆ, ನಾಯಕರಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

Actor Upendra
ಬೆಣ್ಣೆ ನಗರಿಗೆ ಉಪೇಂದ್ರ ಭೇಟಿ

By

Published : Jan 12, 2021, 4:38 PM IST

ದಾವಣಗೆರೆ: ಯಾರೇ ನಾಯಕ ಎಂದು ಹೇಳಿಕೊಂಡು ಬಂದರೂ ನೀನು ನನ್ನ ಕೆಲಸಗಾರನಯ್ಯ ಎಂದು ಹೇಳ್ಬೇಕು ಎಂದು ಪ್ರಜಾಕೀಯ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದ್ದಾರೆ.

ಚನ್ನಗಿರಿ ತಾಲೂಕಿನ ಕಾರಿಂಗನೂರು ಗ್ರಾಪಂ ಅರೇಹಳ್ಳಿಯ ಎಸ್​ಸಿ ಮೀಸಲು ಕ್ಷೇತ್ರದಿಂದ ಪ್ರಜಾಕೀಯ ಬೆಂಬಲಿತ ಅಭ್ಯರ್ಥಿ ಜಯ ಗಳಿಸಿದ್ದು, ಅಭ್ಯರ್ಥಿ ಚೇತನ್​​​ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಅವರು, ನಿಮ್ಮ‌ ಜವಾಬ್ದಾರಿ ಮತ ಹಾಕೋದು ಒಂದೇ ಅಲ್ಲ. ಅದರ ಬದಲಾಗಿ ಅವರನ್ನು ನೀವು ಕೇಳ್ಬೇಕು, ಏನ್ ಮಾಡ್ತಾ ಇದ್ದೀರಾ, ಪ್ರತಿಯೊಂದು ಲೆಕ್ಕ ಕೊಡಿ ಎಂದು ಕೇಳ್ಬೇಕು ಎಂದರು. ನನ್ನ ಕೆಲಸ ಚೆನ್ನಾಗಿ ಇದೆಯಾ ಎಂದು ಚೇತನ್ ನಿಮ್ಮ ಬಳಿ ಕೇಳುತ್ತಾರೆ. ಚೆನ್ನಾಗಿ ಮಾಡಿದ್ದರೆ ಮುಂದುವರಿಯುತ್ತಾರೆ, ಇಲ್ಲವಾದಲ್ಲಿ ರಾಜೀನಾಮೆ ಕೊಡುತ್ತಾರೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಗಳಾದರೋ ಗೊತ್ತಿಲ್ಲ.. ಸಚಿವ ಬೈರತಿ ಬಸವರಾಜ್

ABOUT THE AUTHOR

...view details