ಕರ್ನಾಟಕ

karnataka

ETV Bharat / state

ಗ್ರಿಂಡರ್ ಗೇ ಆ್ಯಪ್ ಮೂಲಕ ವಂಚನೆ, ದರೋಡೆ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್ - Grindr gay application

ಗ್ರಿಂಡರ್ ಗೇ ಆ್ಯಪ್ (Grindr gay application) ಮೂಲಕ ಜನರನ್ನು ವಂಚಿಸಿ, ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳು, ಅವರಿಗೆ ಆಶ್ರಯ ನೀಡಿದ್ದ ಓರ್ವನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

accused arrested under Grindr Gay app fraud case n davanagere
ಗ್ರಿಂಡರ್ ಗೇ ಆ್ಯಪ್ ಮೂಲಕ ವಂಚನೆ

By

Published : Aug 21, 2022, 12:53 PM IST

ದಾವಣಗೆರೆ: ಗ್ರಿಂಡರ್ ಗೇ ಆ್ಯಪ್ (ಸಲಿಂಗರ ಡೇಟಿಂಗ್ ಆ್ಯಪ್/ Grindr gay application) ಮೂಲಕ ಜನರನ್ನು ವಂಚಿಸಿ, ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಕೆಆರ್​ಎಸ್ ಪಕ್ಷದ ಜಿಲ್ಲಾಧ್ಯಕ್ಷನನ್ನು ಬಂಧಿಸುವಲ್ಲಿ ದಾವಣಗೆರೆ ಪೋಲಿಸರು ಯಶಸ್ವಿಯಾಗಿದ್ದಾರೆ. ಉಳಿದವರ ಪತ್ತೆಗೆ ತನಿಖೆ ಚುರುಕುಗೊಂಡಿದೆ.

ಗ್ರಿಂಡರ್ ಗೇ ಆ್ಯಪ್ ಮೂಲಕ ವ್ಯಕ್ತಿಯೋರ್ವನನ್ನು ಪರಿಚಯಿಸಿಕೊಂಡು ಅವರನ್ನು ಕುಂದುವಾಡ ನಿರ್ಜನ ಪ್ರದೇಶಕ್ಕೆ ಕರೆಸಿ 5-6 ಆರೋಪಿಗಳು ಹಲ್ಲೆ ಮಾಡಿ ಅವರ ಬಳಿಯಿದ್ದ ಮೊಬೈಲ್ ಫೋನ್, 25 ಗ್ರಾಂನ ಬಂಗಾರದ ಸರ, 2000 ರೂ. ನಗದು ಹಾಗೂ ಎಟಿಎಂ ಕಾರ್ಡ್ ಮತ್ತು ಪಾಸ್​ವರ್ಡ್ ಪಡೆದುಕೊಂಡು 16,000 ರೂ. ಹಣವನ್ನು ವಿತ್ ಡ್ರಾ ಮಾಡಿಕೊಂಡು ಹಲ್ಲೆ ಮಾಡಿ ಕಾಲ್ಕಿತ್ತಿದ್ದರು.‌ ಈ ಸಲಿಂಗ ಕಾಮದ ಆ್ಯಪ್​​ ಮೂಲಕ ಮೋಸ ಹೋದ ವ್ಯಕ್ತಿಯ ದೂರಿನ ಮೇರೆಗೆ ಪೊಲೀಸರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ ಮಾಡಿದ್ದ ಗ್ಯಾಂಗ್‌ನ ಸದಸ್ಯ ಶ್ರೀನಿವಾಸ ಮತ್ತು ಒಬ್ಬ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಹಾಗೂ ದರೋಡೆ ಗ್ಯಾಂಗ್ ಸದಸ್ಯರಿಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಕೆಆರ್​​ಸ್ ಪಕ್ಷದ ದಾವಣಗೆರೆ ಜಿಲ್ಲಾ ಯುವ ಘಟಕದ ಅಧ್ಯಕ್ಷನಾದ ಮಾಲತೇಶನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ದರೋಡೆ ಮಾಡಿದ್ದ ಮೊಬೈಲ್ ಫೋನ್ ಮತ್ತು ದರೋಡೆ ಮಾಡಲು ಬಳಸಿದ್ದ 2 ಮೊಬೈಲ್ ಫೋನ್‌ಗಳು ಮತ್ತು ಒಂದು ಆಟೋ ರೀಕ್ಷಾ ವಶಕ್ಕೆ ಪಡೆದುಕೊಂಡು ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿತರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ:ಕೆಲಸ ಕೇಳಿ ಬಂದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು, ಮೂವರ ಬಂಧನ

ABOUT THE AUTHOR

...view details