ದಾವಣಗೆರೆ:ನಗರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ. ಅಕ್ಕ-ತಂಗಿ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪ್ರಕರಣ ಬೆಳಕಿಗೆ ಬಂದ ಮೂರೇ ದಿನದಲ್ಲಿ ಬಂಧಿಸಲಾಗಿದೆ.
ಕೊಲೆಯಾದ ಸಹೋದರಿಯರಿಬ್ಬರಲ್ಲಿ ಒಬ್ಬರ ಪತಿಯೇ ಪ್ರಕರಣದ ಆರೋಪಿಯಾಗಿದ್ದಾನೆ. ಪೊಲೀಸರು ಮಂಜುನಾಥ್ (46) ಎಂಬುವನನ್ನು ಬೆಂಗಳೂರಿನ ಚನ್ನಾಪುರದಲ್ಲಿ ಬಂಧಿಸಿದ್ದಾರೆ. ಆರೋಪಿಯ ಪತ್ನಿ ಗೌರಮ್ಮ (35) ಹಾಗೂ ಗೌರಮ್ಮಳ ತಂಗಿ ರಾಧಮ್ಮ(32)ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಹೋದರಿಯರು ಆಂಜನೇಯ ಮಿಲ್ ಬಡಾವಣೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದರು.