ಕರ್ನಾಟಕ

karnataka

By

Published : Oct 24, 2021, 10:19 PM IST

ETV Bharat / state

ಯೂಟ್ಯೂಬ್ ನೋಡಿ ಕೆಲಸಕ್ಕೆ ಸೇರಿದ... ಐದೇ ದಿನದಲ್ಲಿ ಮನೆಗೆ ಕನ್ನ ಹಾಕಿ ಸೆರೆ ಸಿಕ್ಕ!

ಮಾಲೀಕ ಶಿವಮೂರ್ತಿ ಅವರು ಫಾರ್ಮ್ ಹೌಸ್​ನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆಂದು ಯೂಟ್ಯೂಬ್​ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ವಿಡಿಯೋ ನೋಡಿದ ಆರೋಪಿ ವಿಜಯ್ ಕೆಲಸಕ್ಕೆ ಸೇರಿದ್ದ. ಆದರೆ, ಕೇವಲ ಐದು ದಿನದಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ..

Channagiri Police Station
ಚನ್ನಗಿರಿ ಪೊಲೀಸ್​ ಠಾಣೆ

ದಾವಣಗೆರೆ: ಕೆಲಸಕ್ಕೆ ಸೇರಿದ ಐದೇ ದಿನದಲ್ಲಿ ಕಳ್ಳತನ ಮಾಡಿದ್ದ ಖದೀಮನನ್ನು ಪೊಲೀಸರು ಹೆಡೆಮುರಿ ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವ ಘಟನೆ ಚನ್ನಗಿರಿ ಪಟ್ಟಣದ ಫಾರ್ಮ್ ಹೌಸ್​ವೊಂದರಲ್ಲಿ ನಡೆದಿದೆ.

ಪ್ರಕರಣದ ಹಿನ್ನೆಲೆ

ಚನ್ನಗಿರಿ ಪಟ್ಟಣದ ಕಣದ ಸಾಲು ಬೀದಿಯಲ್ಲಿರುವ ಶಿವಮೂರ್ತಿ ಎಂಬುವರ ಫಾರ್ಮ್​ ಹೌಸ್​ನಲ್ಲಿ ಕೋಲಾರ ಮೂಲದ ಆರೋಪಿ ವಿಜಯ್​ ಕೆಲಸಕ್ಕೆ ಸೇರಿದ್ದ. ಐದು ದಿನದ ನಂತರ ಶಿವಮೂರ್ತಿ ಅವರ ಮಡದಿ ಕೆಲಸಗಾರರಿಗೆ ಟೀ ಕೊಟ್ಟು ಬಟ್ಟೆ ಒಣ ಹಾಕಲು ತೆರಳಿದ್ದರು. ಈ ವೇಳೆ ಆತ 8 ಲಕ್ಷದ ಚಿನ್ನ ಹಾಗೂ 20 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಆತನಿಂದ 6.60 ಲಕ್ಷ ಮೌಲ್ಯದ 132 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಯೂಟ್ಯೂಬ್ ನೋಡಿ ಕೆಲಸಕ್ಕೆ ಸೇರಿದ್ದ ಖದೀಮ

ಮಾಲೀಕ ಶಿವಮೂರ್ತಿ ಅವರು ಫಾರ್ಮ್ ಹೌಸ್​ನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆಂದು ಯೂಟ್ಯೂಬ್​ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ವಿಡಿಯೋ ನೋಡಿದ ಆರೋಪಿ ವಿಜಯ್ ಕೆಲಸಕ್ಕೆ ಸೇರಿದ್ದ. ಆದರೆ, ಕೇವಲ ಐದು ದಿನದಲ್ಲಿ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದ. ಇದೀಗ ಚನ್ನಗಿರಿ ಪೊಲೀಸ್​ ಠಾಣೆಯ ಸಿಬ್ಬಂದಿ ತನಿಖೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ:ನನಗೆ ಮೋಸ ಮಾಡಿದಿಯಾ... ವಾಟ್ಸಾಪ್ ಸ್ಟೇಟಸ್​​ ಹಾಕಿ ಮಗಳೊಂದಿಗೆ ನದಿಗೆ ಜಿಗಿದ ಶಿಕ್ಷಕಿ

ABOUT THE AUTHOR

...view details