ದಾವಣಗೆರೆ: ದ್ವೀಚಕ್ರ ವಾಹನ, ಬೊಲೆರೋ ಪಿಕಪ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಬಳಿಯ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಮೃತವ್ಯಕ್ತಿ ಗೋಪನಾಳ್ ಗ್ರಾಮದ ಪರಮೇಶ್ (37) ಎಂದು ತಿಳಿದುಬಂದಿದೆ. ಪರಮೇಶ್ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದಿಂದ ಪಾಂಡೋಮಟ್ಟಿ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿರುವ ವೇಳೆ ಚನ್ನಗಿರಿ ಕಡೆಯಿಂದ ಬಂದ ಬೊಲೆರೋ ಪಿಕಪ್ಗೆ ಡಿಕ್ಕಿಯಾಗಿದೆ. ಅಪಘಾತವಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.