ದಾವಣಗೆರೆ:ಜಿಲ್ಲೆಯ ಜಗಳೂರು ತಾಲೂಕು ಪಂಚಾಯತ್ ಇಂಜಿನಿಯರಿಂಗ್ ಕಚೇರಿಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಬಿ.ಶಿವಕಯಮಾರ ಹಾಗು ಕಚೇರಿ ವ್ಯವಸ್ಥಾಪಕ ಮಂಜುರಾಜ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.
ಜಗಳೂರು ಪಂಚಾಯತ್ ಎಇಇ, ಕಚೇರಿ ವ್ಯವಸ್ಥಾಪಕ ಎಸಿಬಿ ಬಲೆಗೆ - Davanagere
ಜಗಳೂರು ತಾಲೂಕು ಪಂಚಾಯತ್ ಇಂಜಿನಿಯರಿಂಗ್ ಕಚೇರಿಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎಇಇ ಬಿ.ಶಿವಕಯಮಾರ ಹಾಗು ಕಚೇರಿ ವ್ಯವಸ್ಥಾಪಕ ಮಂಜುರಾಜ್
ಗುತ್ತಿಗೆದಾರ ಸಿದ್ದನಗೌಡ ಎಂಬುವರಿಂದ ಶೇ.27 ರಷ್ಟು ಕಮಿಷನ್ಗೆ ಇಂಜಿನಿಯರ್ ಶಿವಕುಮಾರ ಹಾಗು ಕಚೇರಿ ವ್ಯವಸ್ಥಾಪಕ ಮಂಜುರಾಜ್ ಬೇಡಿಕೆ ಇಟ್ಟಿದ್ದರು. ಅಧಿಕಾರಿಗಳ ಬೇಡಿಕೆಯಂತೆ ಇಂದು ಗುತ್ತಿಗೆದಾರ ಸಿದ್ದನಗೌಡ 1 ಲಕ್ಷದ 8 ಸಾವಿರ ರೂ. ಕೊಡುವಾಗ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆ ಕಾಮಗಾರಿಗೆ ಅಧಿಕಾರಿಗಳಿಬ್ಬರು ಕಮಿಷನ್ ಪಡೆಯುತ್ತಿದ್ದ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಎಸಿಬಿ ಎಸ್ಪಿ ಜಯಪ್ರಕಾಶ ಹಾಗು ಡಿಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.