ದಾವಣಗೆರೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬೊಮ್ಮನಹಳ್ಳಿ ವಿಭಾಗದ ಎಇಇ ಸಿಎ ಆಂಜಿನಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆಂಜಿನಪ್ಪ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದವರಾಗಿದ್ದು, ಇಲ್ಲಿಯ ಮನೆ ಹಾಗೂ ಬೆಂಗಳೂರಿನ ಜಗಜೀವನರಾಂ ನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ.
ಮೇಲ್ನೋಟಕ್ಕೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 9.79 ಲಕ್ಷ ರೂಪಾಯಿ ನಗದು, 22 ಎಕರೆ ಅಡಿಕೆ ತೋಟ, ನಾಲ್ಕು ಕಂಪನಿಗೆ ಸೇರಿದ ಐಷಾರಾಮಿ ಕಾರ್ಗಳು, ಬೆಂಗಳೂರು ಮತ್ತು ಲೋಕಿಕೆರೆಯಲ್ಲಿ ಗ್ರಾಮದಲ್ಲಿ ಐಷಾರಾಮಿ ಮನೆಗಳು ದಾಳಿ ವೇಳೆ ಪತ್ತೆಯಾಗಿವೆ. ಅಲ್ಲದೇ, ಚನ್ನಗಿರಿ ತಾಲೂಕಿನಲ್ಲಿರುವ ಅವರ ಪತ್ನಿಯ ಮನೆಯಲ್ಲಿಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ ಪತ್ತೆ - acb officers latest raid on bbmp employee
ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಲೋಕಿಕೆರೆಯ ಅವರ ನಿವಾಸದ ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.
ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ