ಕರ್ನಾಟಕ

karnataka

ETV Bharat / state

ಸಿಎಎ ಪರ ಎಬಿವಿಪಿಯಿಂದ ಜಾಗೃತಿ ಜಾಥಾ.. - ದಾವಣಗೆರೆ ಜಾಗೃತಿ ರ್ಯಾಲಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಪರವಾಗಿ ಎಬಿವಿಪಿ ವತಿಯಿಂದ ದೇಶದೊಂದಿಗೆ ನಾವು ಎಂಬ ಕುರಿತ ಜಾಗೃತಿ ರ್ಯಾಲಿ ನಡೆಸಿದರು.‌

abvp-protest-in-davanagere
ಸಿಎಎ ಪರ ಎಬಿವಿಪಿಯಿಂದ ಜಾಗೃತಿ ಜಾಥಾ

By

Published : Jan 11, 2020, 5:14 PM IST

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಪರವಾಗಿ ಎಬಿವಿಪಿ ವತಿಯಿಂದ ದೇಶದೊಂದಿಗೆ ನಾವು ಎಂಬ ಕುರಿತ ಜಾಗೃತಿ ರ್ಯಾಲಿ ನಡೆಸಿದರು.‌

ನಗರದ ಜಯದೇವ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಜಮಾವಣೆಗೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಿಎಎ ಹಾಗೂ ಎನ್​ಆರ್​​ಸಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಬಳಿಕ ವಿರೋಧ ವ್ಯಕ್ತಪಡಿಸಲಿ ಎಂದರು.

ಸಿಎಎ ಪರ ಎಬಿವಿಪಿಯಿಂದ ಜಾಗೃತಿ ಜಾಥಾ..

ಮುಸ್ಲಿಂ ಸಮುದಾಯದ ವಿರುದ್ಧ ಎನ್​ಆರ್​​ಸಿ ಹಾಗೂ ಸಿಎಎ ಜಾರಿಗೊಳಿಸಿಲ್ಲ. ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗುರುತಿಸಿ ಹೊರದಬ್ಬುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.‌ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಗ್ಗೆ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿವೆ. ಈ ಮೂಲಕ ರಾಜಕೀಯ ಮಾಡಲು ಹೊರಟಿವೆ ಈ ಕ್ರಮ ಸರಿಯಲ್ಲ ಎಂದರು.

ABOUT THE AUTHOR

...view details