ದಾವಣಗೆರೆ:ಕಳೆದ ನಾಲ್ಕು ವರ್ಷಗಳಿಂದ ಹಿಮಾಚಲ ಪ್ರದೇಶಗಳ ಕುಲುಮನಾಲಿ ತಾಲೂಕಿನ ಕಲಾತ್ನಲ್ಲೇ ಉಳಿದಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹೆಸ್ರಿ ಗ್ರಾಮದ ಸುಶೀಲಮ್ಮ ಎಂಬುವರು ಕೊನೆಗೂ ತವರಿಗೆ ಮರಳಿದ್ದಾರೆ.
'ಈಟಿವಿ ಭಾರತ' ಫಲಶ್ರುತಿ: ಸಿಎಂ ತವರಿನ ಮಹಿಳೆ ಸುರಕ್ಷಿತವಾಗಿ ಕುಲುಮನಾಲಿಯಿಂದ ವಾಪಸ್! - ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರ
ಕಳೆದ ನಾಲ್ಕು ವರ್ಷಗಳಿಂದ ಹಿಮಾಚಲ ಪ್ರದೇಶದ ಕುಲುಮನಾಲಿಯಲ್ಲಿ ಉಳಿದು ಭಾಷಾ ಸಮಸ್ಯೆಯಿಂದ ತವರಿಗೆ ಬರಲಾಗದೇ ಒದ್ದಾಡುತ್ತಿದ್ದ ಮಹಿಳೆಯನ್ನು ಕರ್ನಾಟಕಕ್ಕೆ ಕರೆತರಲಾಗಿದೆ.
ಭಾಷಾ ಸಮಸ್ಯೆಯಿಂದ ಒದ್ದಾಡುತ್ತಿದ್ದ ಸುಶೀಲಮ್ಮ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದು 'ಈಟಿವಿ ಭಾರತ್'. ವರದಿ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಾವಣಗೆರೆ ಜಿಲ್ಲಾಡಳಿತ ಸುಶೀಲಮ್ಮರನ್ನು ಕರೆತರುವಲ್ಲಿ ಕೊನೆಗೂ ಯಶಸ್ವಿ ಆಗಿದೆ. ಉಕ್ಕಡಗಾತ್ರಿ ಅಂತಾ ಮಾತ್ರ ಹೇಳುತ್ತಿದ್ದ ಆಕೆಯನ್ನ ಕರೆತರುವಂತೆ ಹಿಂದಿನ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಬಳಿಕ ಕಳೆದ ಮಾರ್ಚ್ 10ರಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಯೋಜನಾ ನಿರ್ದೇಶಕ ದುರುಗೇಶ್ ಕುಲುಮನಾಲಿಗೆ ತೆರಳಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರಾದ ಸುಶೀಲ ಶರ್ಮಾ ಅವರನ್ನು ಭೇಟಿ ಮಾಡಿ ಸುಶೀಲಮ್ಮರನ್ನು ವಾಪಾಸ್ ತವರಿಗೆ ಕರೆದುಕೊಂಡು ಬರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದು ಬಂದಿದ್ದರು.
ಸುಶೀಲಮ್ಮ ಮಾನಸಿಕ ಅಸ್ವಸ್ಥರಾದ ಕಾರಣ ವಾಪಸ್ ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ. ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗಿತ್ತು. ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರ ಮುಖೇನ ಕಾನೂನಿನ ಪ್ರಕಾರ ವಾಪಸ್ ಕರ್ನಾಟಕಕ್ಕೆ ಸುಶೀಲಮ್ಮರನ್ನ ಕರೆತರುವ ಪ್ರಯತ್ನ ನಡೆಸಿತು. ತಮ್ಮನ್ನು ತವರಿಗೆ ಮರಳಿ ಕರೆತರುವ ಪ್ರಯತ್ನದಲ್ಲಿ ಈಟಿವಿ ಭಾರತ ಯಶಸ್ವಿಯಾಗಿದ್ದು, ವಾಪಸ್ ಬಂದ ಸುಶೀಲಮ್ಮ ಈಟಿವಿ ಭಾರತ್ಗೆ ಧನ್ಯವಾದ ಹೇಳಿದ್ದಾರೆ.