ದಾವಣಗೆರೆ: ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಸುತ್ತಿದ್ದ ಶಿಕ್ಷಕಿ ಜಾತಿ ಕ್ರೌರ್ಯಕ್ಕೆ ಒಳಗಾದರೂ ಛಲಬಿಡದೇ ಮಕ್ಕಳ ಉನ್ನತ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ.
ಅಂಗನವಾಡಿ ಹೊರಗೆ ನಿಲ್ಲಿಸಿದ್ದ ಗ್ರಾಮಸ್ಥರು:ಶಿಕ್ಷಕಿ ದಲಿತೆ ಎಂಬ ಒಂದೇ ಕಾರಣಕ್ಕೆ ಗ್ರಾಮದ ಜನ ಇಂತಹ ಶಿಕ್ಷಕಿ ನಮ್ಮ ಅಂಗನವಾಡಿಗೆ ಬೇಕಾಗಿಲ್ಲ, ಎಂದು ಪಟ್ಟು ಹಿಡಿದು ಮೂರು ತಿಂಗಳುಗಳ ಕಾಲ ಅಂಗನವಾಡಿಗೆ ಬೀಗ ಹಾಕಿ ಆ ಶಿಕ್ಷಕಿಯನ್ನು ಹೊರ ನಿಲ್ಲುವಂತೆ ಮಾಡಿದ್ರು. ಅ ದಿಟ್ಟ ಶಿಕ್ಷಕಿ ಆ ಅಂಗನವಾಡಿಯಿಂದ ದಾವಣಗೆರೆಯ ಕೂಗಳತೆಯಲ್ಲಿರುವ ಆವರಗೆರೆಯ ಗೋಶಾಲೆ ಅಂಗನವಾಡಿಗೆ ವರ್ಗಾವಣೆಗೊಂಡು ಕಾನ್ವೆಂಟ್ಗೆ ಸೆಡ್ಡು ಹೊಡೆಯುವಂತೆ ಅಂಗನವಾಡಿ ಅಭಿವೃದ್ಧಿ ಮಾಡಿದ್ದಾರೆ.
ಜಾತಿ ತಾರತಮ್ಯ: ಮಹಿಳೆ ಮನಸ್ಸು ಮಾಡಿದ್ರೇ ಏನ್ ಬೇಕಾದರೂ ಮಾಡಬಲ್ಲಳು ಎಂಬ ಮಾತಿಗೆ ಉತ್ತಮ ಉದಾಹರಣೆಗೆ ದಾವಣಗೆರೆ ತಾಲೂಕಿನ ಹಳೇ ಚಿಕ್ಕನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಲಕ್ಮಿ ಸಾಕ್ಷಿ. ಇದೇ ಹಳೇಚಿಕ್ಕನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಜಾತಿ ಎಂಬ ಪೆಡಂಭೂತ ಶಿಕ್ಷಕಿಗೆ ಕಂಠಕವಾಗಿತ್ತು. ದಲಿತೆ ಎಂಬ ಕಾರಣಕ್ಕೆ ಹಳೇ ಚಿಕ್ಕನಹಳ್ಳಿ ಗ್ರಾಮಸ್ಥರು ಶಿಕ್ಷಕಿ ಲಕ್ಷ್ಮಿ ಅವರನ್ನು ಅಂಗನವಾಡಿಗೆ ಬರದಂತೆ ಬೀಗ ಜಡಿಯಲಾಗಿತ್ತು. ಸತತ ಮೂರು ತಿಂಗಳ ಕಾಲ ಅಂಗನವಾಡಿ ಹೊರಗೆ ನಿಂತು ಮಾನಸಿಕ ನೋವು ಅನುಭವಿಸಿದ್ದ ಶಿಕ್ಷಕಿ ಲಕ್ಷ್ಮಿಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾವಣಗೆರೆಯ ಆವರಗೆರೆ ಬಳಿ ಇರುವ ಗೋಶಾಲೆಯ ಅಂಗನವಾಡಿಗೆ ವರ್ಗಾವಣೆ ಮಾಡಿತ್ತು.