ಕರ್ನಾಟಕ

karnataka

ETV Bharat / state

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ‌ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಭೆ - Panchamasali society

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ದಾವಣಗೆರೆ ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಲಾಯಿತು‌. ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜ್ಯಯ ಶ್ರೀಗಳು ಭಾಗಿಯಾಗಿದ್ದರು.

Davangere
ಪಂಚಮಸಾಲಿ ಸಮಾಜಕ್ಕೆ‌ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಭೆ

By

Published : Dec 8, 2020, 5:13 PM IST

Updated : Dec 8, 2020, 6:21 PM IST

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಸಭೆ ನಡೆಸಲಾಯಿತು‌. ದಾವಣಗೆರೆ ನಗರದ ಖಾಸಗಿ ಹೋಟೆಲ್​ನಲ್ಲಿ ಮೀಸಲಾತಿ ವಿಚಾರವಾಗಿ ಕರೆಯಲಾದ ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜ್ಯಯ ಶ್ರೀಗಳು ಭಾಗಿಯಾಗಿ ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಪಂಚಮಸಾಲಿ ಸಮಾಜಕ್ಕೆ‌ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಭೆ

ಪಂಚಾಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಕೂಡಲ ಸಂಗಮದ ಬಸವ ಶ್ರೀ ಜಯಮೃತ್ಯುಂಜಯ ಶ್ರೀಯವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಹೇಳಿದಂತೆ ಸಿಎಂ‌ ನಡೆದುಕೊಂಡಿಲ್ಲ‌ ಎಂದು ಸಭೆಯಲ್ಲಿ‌ ಭಾಹಿಯಾಗಿದ್ದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ. 23ರಂದು ಕೂಡಲಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಂಚ ಲಕ್ಷ ಹೆಜ್ಜೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲು ಸಮಾಜ ತೀರ್ಮಾನಿಸಿದೆ. ಅಲ್ಲದೆ ಸಭೆಯಲ್ಲಿಂದು ಅದರ ರೂಪುರೇಷೆಗಳನ್ನು ಸಹ ಹಾಕಿಕೊಳ್ಳಲಾಯಿತು.

ಸಭೆಯಲ್ಲಿ ವಿಜಯನಂದ ಕಾಶಪ್ಪನವರ, ಪಾಲಿಕೆ ಮೇಯರ್‌ ಅಜಯ್ ಕುಮಾರ್ ಕೂಡ ಭಾಗಿಯಾಗಿದ್ದರು.

Last Updated : Dec 8, 2020, 6:21 PM IST

ABOUT THE AUTHOR

...view details