ದಾವಣಗೆರೆ: ವಾಯು ವಿಹಾರಕ್ಕೆಂದು ಬಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಜಯನಗರದ ಚರ್ಚ್ ಮುಂಭಾಗ ಇರುವ ಪಾರ್ಕ್‌ನಲ್ಲಿ ನಡೆದಿದೆ.
ವಾಯು ವಿಹಾರಕ್ಕೆಂದು ಬಂದು ಪಾರ್ಕ್‌ನಲ್ಲಿ ನೇಣಿಗೆ ಶರಣಾದ ವ್ಯಕ್ತಿ - ಪಾರ್ಕ್‌ನಲ್ಲಿ ನೇಣಿಗೆ ಶರಣಾದ ವ್ಯಕ್ತಿ
ಮುಂಜಾನೆ ನಾಲ್ಕು ಗಂಟೆಗೆ ವಾಯು ವಿಹಾರಕ್ಕೆಂದು ಬಂದು ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣಿಗೆ ಶರಣಾದ ವ್ಯಕ್ತಿ
ರಾಜಣ್ಣ (63) ನೇಣಿಗೆ ಶರಣಾದ ವ್ಯಕ್ತಿ. ಮುಂಜಾನೆ ನಾಲ್ಕು ಗಂಟೆಗೆ ಪಾರ್ಕ್ಗೆ ಬಂದಿದ್ದ ರಾಜಣ್ಣ ಇಲ್ಲಿನ ಸಣ್ಣ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.
ಪಾರ್ಕ್‌ನಲ್ಲಿ ನೇಣಿಗೆ ಶರಣಾದ ವ್ಯಕ್ತಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.